ಬೆಳಗಾವಿ: ಶತಮಾನದ ಇತಿಹಾಸ ಹೊಂದಿದ ಕೆಎಲ್‌ಇ ಸಂಸ್ಥೆಯು ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನೆ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿಯ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ ಮತ್ತು ಎನ್.ಐ.ಸಿ.ಎಚ್.ಡಿ. ಗ್ಲೋಬಲ್ ಜಾಲತಾಣದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರಲ್ಲಿ ಪ್ರಸವಾನಂತರದ ರಕ್ತಹೀನತೆಯ ಚಿಕಿತ್ಸೆಗಾಗಿ ಐ.ವಿ.ಆಯರನ್ ಆದ್ಯತೆ ಎಂಬ ಸಂಶೋಧನೆ ಅಧ್ಯಯನದ ಅಂತಾರಾಷ್ಟ್ರೀಯ ಪ್ರಶಿಕ್ಷಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅಂತಾರಾಷ್ಟ್ರೀಯ ಮಟ್ಟದ ವಿಶ್ವದ ಅನೇಕ ರಾಷ್ಟ್ರಗಳ ಸಂಶೋಧಕ ಪ್ರತಿನಿಧಿಗಳ ಪ್ರಶಿಕ್ಷಣಾ ಶಿಬಿರವು ಬೆಳಗಾವಿ ಕೆಎಲ್‌ಇ ಸಂಸ್ಥೆಯಲ್ಲಿ ನಡೆಯುತ್ತಿರುವುದು ವಿಶ್ವಮಾನ್ಯತೆಗೆ ಉದಾಹರಣೆಯಾಗಿದೆ. ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆಯ ಸಾಧನೆ ಮಾಡಿದೆ. ಅಲ್ಲದೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ ಎಂದರು.
ಅಮೆರಿಕಾದ ಥಾಮಸ್ ಜೆಫರ್‌ಸನ್ ವಿಶ್ವವಿದ್ಯಾನಿಲಯದ ಸಂಶೋಧಕ ಡಾ.ರಿಚರ್ಡ್ ಡರ್ಮನ್, ಅಮೆರಿಕಾದ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್ ಹಿರಿಯ ಅಧಿಕಾರಿ ಡಾ. ಜಿಯಾನ್ ಯಾನ್, ಕೊಲಂಬಿಯಾ ವಿಶ್ವವಿದ್ಯಾಲಯದ ಡಾ. ರಾಬರ್ಟ್ ಗೋಲ್ಡನ್‌ಬರ್ಗ, ಅಮೆರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ರೆನಾಟಾ ಹಾಫಸ್ಟೇಟರ್, ಅಮೆರಿಕಾದ ಆರ್.ಟಿ.ಐ. ಇಂಟರ್‌ನ್ಯಾಶನಲ್ ಸಂಸ್ಥೆಯ ಸಂಶೋಧನಾ ಅಧಿಕಾರಿ ಎಲಿಜ್‌ಬೆತ್ ಮೆಕ್ಲೂರಲ್, ಸಂಶೋಧಕ ಡಾ. ಶಿವಪ್ರಸಾದ ಗೌಡರ ಮಾತನಾಡಿದರು.
ಕಿನ್ಯಾ, ಜಾಂಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಬಾಂಗ್ಲಾದೇಶ ಮತ್ತು ಗ್ವಾಟೆಮಾಲಾ ದೇಶದ ಸಂಶೋಧನಾ ಸಂಯೋಜಕ ವೈದ್ಯರು, ಡಿಎಚ್‌ಒ ಡಾ. ಮಹೇಶ ಕೋಣಿ, ಡಾ. ಸಿಮಲ್ ಥಿಂಡ್, ಡಾ. ಲಾರಾ ಡಾನಿಯಲ್ ವಾಗನೆರ, ಡಾ. ಜೆಮಿ ವೆಟ್ಸ್‌ಕಾಟ್, ಡಾ. ಪೌಲ್, ಡಾ.ಎಂ.ಬಿ.ಬೆಲ್ಲದ, ಡಾ. ಎಂ.ಸಿ.ಮೆಟಗುಡ್ಡ, ಡಾ.ಎಂ.ಎಸ್.ಸೋಮಣ್ಣವರ, ಡಾ. ಅವಿನಾಶ ಕವಿ, ಡಾ. ಉಮೇಶ ಚರಂತಿಮಠ, ಡಾ. ಕುನಾಲ, ಡಾ. ವೈಶಾಲಿ ಇತರರಿದ್ದರು.