ಔರಾದ್: ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಯೋಜನೆಗೆ ಅಂಗನವಾಡಿ ಕೇಂದ್ರ ಭದ್ರ ಬುನಾದಿಯಾಗಿದೆ ಎಂದು ಸಂತಪುರ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವಡಗಾಂವ ವಲಯದ ಮೇಲ್ವಿಚಾರಕಿ ರಾಜಶ್ರೀ ಅಭಿಪ್ರಾಯಪಟ್ಟರು.
ತಾಲೂಕಿನ ನಾಗೂರ (ಎಂ) ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರಿಗೆ ಶನಿವಾರ ಆಯೋಜಿಸಿದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸುವಲ್ಲಿ ಕಾರ್ಯರ್ತೆಯರು ಹಾಗೂ ಸಹಾಯಕಿಯರ ಪಾತ್ರ ಅಪರಾವಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮೂರು ವರ್ಷದ ಮಗುವಿನಿಂದ ಆರು ವರ್ಷಗಳವರೆಗೆ ಶಾಲಾ ಪೂರ್ವ ಶಿಕ್ಷಣ ಪಡೆಯಬಹುದು. ಇದಕ್ಕೆ ಅರ್ಹರಾದವರಿಗೆ ಸೌಲಭ್ಯ ಒದಗಿಸುವ ಯೋಜನೆ ಹಾಕಿಕೊಳ್ಳಬೇಕು. ಮಗುವಿಗೆ ಶಿಕ್ಷಣದ ಜತೆಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಪ್ರಮುಖರಾದ ಅನೀತಾ, ರೇಣುಕಾ ಗೋಡೆ, ಅಂಬಿಕಾ, ಸರಸ್ವತಿ, ಶ್ರೀದೇವಿ, ಚಿನ್ನಮ್ಮ, ಜಗದೇವಿ, ಜ್ಯೋತಿ ಇತರರಿದ್ದರು.