ಜಿಲ್ಲೆ

ಶಿಕ್ಷಣ ಪಡೆದು ಕೀರ್ತಿವಂತರಾಗಿ

ಶಹಾಪುರ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಕೀರ್ತಿ ರುವಂತಹ ವಿದ್ಯಾರ್ಥಿಗಳಾಗಬೇಕು ಎಂದು ದಕ್ಷಿಣ ಭಾಗದ ಸಿಆರ್‌ಪಿ ವೀರಭದ್ರಯ್ಯ ಹೇಳಿದರು. ನಗರದ ಹಳಪೇಟೆಯಲ್ಲಿನ ಜ್ಞಾನಗಂಗೋತ್ರಿ ಶಾಲೆಯಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಶೈಕ್ಷಣಿಕ ಬಲವರ್ಧನೆಗಾಗಿ ಹೆಚ್ಚಿನ ಪ್ರಯತ್ನ ಅಗತ್ಯವಾಗಿದೆ. ಹೀಗಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಶಾಲೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಮಾತೃ ಛಾಯಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ತಿಪ್ಪಣ್ಣ ಕ್ಯಾತನಾಳ ಮಾತನಾಡಿದರು. ಈ ವೇಳೆ ಮಕ್ಕಳಿಗೆ ವ್ಯಕ್ತಿತ್ವ ವಿಕಸ ಪುಸ್ತಕ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ಮುರಳಿಧರ ಕುಲಕರ್ಣಿ, ನರಸಿಂಹಾಚಾರ್ಯ ರೊಟ್ಟಿ, ನಾರಾಯಣಾಚಾರ್ಯ ಹಾಗೂ ಶಿಕ್ಷಕ ಸಿಬ್ಬಂದಿ ಭಾಗವಹಿಸಿದ್ದರು.

ಶಹಾಪುರ ನಗರದ ಹಳಪೇಟೆಯಲ್ಲಿನ ಜ್ಞಾನಗಂಗೋತ್ರಿ ಶಾಲೆಯಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವಕ್ಕೆ ಸಿಆರ್‌ಪಿ ವೀರಭದ್ರಯ್ಯ ಚಾಲನೆ ನೀಡಿದರು.