ಚಿತ್ರದುರ್ಗ: ಸಹಕಾರ ಸಂಘಗಳಿಂದ ರಾಜ್ಯಸಹಕಾರ ಮಹಾಮಂಡಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಶಿಕ್ಷಣ ನಿಧಿ ಪಾವತಿ ಆಗುತ್ತಿದೆ. ಇದರ ಸ ದುಪಯೋಗ ಪಡಿಸಿಕೊಂಡು,ಸಹಕಾರಿಗಳಿಗೆ ಹೆಚ್ಚಿನ ತರಬೇತಿ ಕಾರ‌್ಯಾಗಾರಗಳನ್ನು ಏರ್ಪಡಿಸ ಬೇಕಿದೆ ಎಂದು ಮಹಾಮಂಡಳದ ನಿ ರ್ದೇಶಕ ಆರ್.ರಾಮರೆಡ್ಡಿ ಹೇಳಿದರು.
ಜಿಲ್ಲೆಯ ಪತ್ತಿನ ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಿಗೆ ನಗರದ ಜೋಗಿಮಟ್ಟಿ ಅತಿಥಿಗೃಹದ ಲ್ಲಿ ಗುರುವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ,ತರಬೇತಿ ಪ್ರಯೋಜನ ಪಡೆದು,ರೈತರಿಗೆ ಉತ್ತಮ ಸೇವೆ ಸಲ್ಲಿಸುವಂತೆ ಸಹಕಾರಿಗಳಿಗೆ ಮನವಿ ಮಾಡಿದರು.
ಆದಾಯ ತೆರಿಗೆ ಇಲಾಖೆ ಜೆಎಇ ಎಂ.ಅಜ್ಜಣ್ಣ,ಆದಾಯ ತೆರಿಗೆ ಪಾವತಿ ವಿಷಯದಲ್ಲಿ ಸಹಕಾರ ಸಂಘಗಳು ನಿರ್ಲಕ್ಷೃತೋರಬಾರ ದೆಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣಕೋಗುಂಡೆ ಮಾತನಾಡಿ,ಗ್ರಾಹಕರಿಗೆ ಉತ್ತ ಮ ಸೇವೆ ನೀಡುವುದು ಸಹಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು. ನಿರ್ದೇಶಕ ಜಿಂಕಲು ಬಸವರಾಜ್ ಪ್ರಾಸ್ತಾವಿಕವಾ ಗಿ ಮಾತನಾಡಿದರು.
ಯೂನಿಯನ್ ಉಪಾಧ್ಯಕ್ಷ ಎಚ್.ವಿ.ಪ್ರತಾಪಸಿಂಹ,ನಿರ್ದೇಶಕರಾದ ಜಿ.ಇ.ಅಜ್ಜಪ್ಪ,ಕೆ.ಎಚ್.ಜಗನ್ನಾಥ್,ಜಿ.ಬಿ.ಶೇಖರಪ್ಪ, ಡಿ.ಎಂ. ಮಹೇಶ್ವರಪ್ಪ,ಲೆಕ್ಕಪರಿಶೋಧಕ ಮಂಜುನಾಥ್,ಸಂಪಲ್ಮೂಲ ವ್ಯಕ್ತಿಗಳಾದ ಅನಿಲ್ ಭಾರದ್ವಾಜ್,ಎಚ್.ಬಿ.ಮಂಜುನಾಥ್ ಉಪನ್ಯಾಸ ನೀ ಡಿದರು.ಗುರುಸ್ವಾಮಿ ಪ್ರಾರ್ಥಿಸಿದರು. ಜಯಶ್ರೀ ಪಿ.ಹುನಗುಂದ ಸ್ವಾಗತಿಸಿ,ನಾಗರಾಜಪಾಟೀಲ್ ವಂದಿಸಿದರು.