ಜಿಲ್ಲೆ

ಶಿಕ್ಷಣ ಉತ್ತಮ ವ್ಯಕ್ತಿತ್ವಕ್ಕೂ ಸಹಕಾರಿಯಾಗಬೇಕು

ಚಿತ್ರದುರ್ಗ: ವೈಯಕ್ತಿಕ ಸಮಸ್ಯೆಗಳು ಕಲಿಕೆಗೆ ಎಂದಿಗೂ ಅಡ್ಡಿಯಾಗಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಹೇಳಿದರು.
ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ, ರೋವರ್ಸ್‌ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಎಂದಾಗ ಬಾರದು. ಶಿಕ್ಷಣ ನಮ್ಮ ವ್ಯಕ್ತಿತ್ವವನ್ನೂ ಉತ್ತಮ ರೀತಿಯಲ್ಲಿ ರೂಪಿಸುವಂತೆ ಇರಬೇಕೆಂದು, ಮಹಾನ್ ವ್ಯಕ್ತಿಗಳನ್ನು ಉದಾಹರಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನದಲ್ಲಿ ನಿರತರಾಗಬೇಕು. ಯಾವುದೇ ಕಾರಣಕ್ಕೂ ಕಾಲಹರಣ ಮಾಡಬಾರದು. ಶ್ರದ್ಧೆಯಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ.ಎಂ.ಗುರುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ರಾಂತ ಪ್ರಾಧ್ಯಾಪಕ ಸಲಬೊಮ್ಮನಹಳ್ಳಿ ಸಿದ್ದೇಶ್‌ಗೌಡ, ಪ್ರಾಂಶುಪಾಲ ಎಚ್.ಬಿ.ನರಸಿಂಹಮೂರ್ತಿ, ಉಪನ್ಯಾಸಕರಾದ ಬಿ.ಕೃಷ್ಣಪ್ಪ, ಡಿ.ಶ್ರೀನಿವಾಸ್, ಎಸ್.ರಹಮತ್‌ಉಲ್ಲಾ, ಡಿ.ಕಾವ್ಯಾ, ಎನ್.ದೊಡ್ಡಪ್ಪ, ಎಸ್.ಎನ್.ಹೇಮಂತರಾಜು, ಚಂಪಕಲಾ, ಮುಖ್ಯಶಿಕ್ಷಕ ಮಹಮದ್ ಜಕಾಉಲ್ಲಾ ಮತ್ತಿತರರು ಇದ್ದರು.