ಹುಮನಾಬಾದ್: ಶಾಲೆಯ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ಶಿಕ್ಷಣದ ಜತೆಗೆ ದೇಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವನ್ನು ಬೆಳೆಸಬೇಕು ಎಂದು ಸಂಸ್ಥೆಯ ಕೇಂದ್ರ ಸಮಿತಿ ಕಾರ್ಯಧ್ಯಕ್ಷ ಕೇಶವರಾವ ತಳಘಟಕರ್ ಕರೆ ನೀಡಿದರು.
ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಬಸವತೀರ್ಥ ವಿದ್ಯಾಪೀಠ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸ್ವತಂತ್ರೋತ್ಸವ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶ ಮೊದಲು ಎನ್ನುವುದು ಎಲ್ಲರೂ ಅರಿಯಬೇಕು. ನಮ್ಮ ಹಿರಿಯರ, ಸ್ವತಂತ್ರ ಹೋರಾಟಗಾರ ತ್ಯಾಗ ಬಲಿದಾನದ ಫಲವಾಗಿ ನಾವೇಲ್ಲರೂ ಸ್ವತಂತ್ರವಾಗಿದ್ದೆ ಎಂದರು.
ಪಿ.ಎಸ್.ಐ ಐಯ್ಯಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಬಗ್ಗೆ ಅರ್ಪಣಾ ಮನೋಭಾವ ಹೊಂದಿರಬೇಕು ಮತ್ತು ಈಗಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿನಿಯರು ವಾಟ್ಸಪ್ ಮತ್ತು ಟ್ವಿಟರ್‌ಗಳಲ್ಲಿ ತಮ್ಮ ಭಾವಚಿತ್ರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ ಎಂದು ಕರೆ ನೀಡಿದರು.
ಸ್ಥಳೀಯ ಅಧ್ಯಕ್ಷ ಸೋಮಯ್ಯ ಹೀರೆಮಠ, ಪ್ರಮುಖರಾದ ರಮೇಶ ಮಹೇಂದ್ರಕರ, ಗುಂಡಯ್ಯ ತಿರ್ಥಾ, ವೀದ್ಯಾವತಿ ತೀರ್ಥಾ, ಚಂದ್ರಕಾಂತ ಬಿರಾದರ, ಮಸ್ತಾನ್ ಪಟೆಲ್ ಉಪಸ್ಥಿತರಿದ್ದರು. ಸಂಗಮೆಶ ಪಾಟೀಲ ನಿರೂಪಣೆ ಮಾಡಿದರು.