ಕಲಬುರಗಿ: ಶಿಕ್ಷಕರು ಕೇವಲ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಮಕ್ಕಳನ್ನು ಗುರುತಿಸದೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸುವ ಮೂಲಕ ವಿದ್ಯಾರ್ಥಿಗಳಿಗೆ ಆದರ್ಶ ಗುರುಗಳಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ಸಲಹೆ ನೀಡಿದರು.
ನಗರದ ಬಸವ ಮಂಟಪದಲ್ಲಿ ವಿಶ್ವ ಜ್ಯೋತಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಎಸ್.ಮುಧೋಳ ಮಾತನಾಡಿ, ದೇಶದ ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಿಗೆ ಇದೆ. ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ರೂಪುಗೊಳಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಆರ್.ಜಿ.ಶಟಗಾರ ಅಧ್ಯಕ್ಷತೆ ವಹಿಸಿದ್ದರು.
ಸಂಚಾರಿ ವಿಭಾಗದ ಪೊಲೀಸ್ ಸಹಾಯಕ ಆಯುಕ್ತೆ ಸುಧಾ ಆದಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪತ್ರಕರ್ತ ದೇವೇಂದ್ರಪ್ಪ ಕಪನೂರ, ಕಲ್ಯಾಣಕುಮಾರ ಶೀಲವಂತ, ವಿಶ್ವನಾಥ ಸುಲೇಪೇಟ ಕೋಡ್ಲಿ, ಪ್ರಭುಲಿಂಗ ಮೂಲಗೆ, ಮಾಲತಿ ರೇಷ್ಮಿ, ಮನೋಹರ ಪೊದ್ದಾರ, ಜಗದೀಶ ಮರಪಳ್ಳಿ, ನಾಗೇಂದ್ರಪ್ಪ ಮಾಡ್ಯಾಳೆ, ಶರಣರಾಜ್ ಛಪ್ಪರಬಂದಿ, ಎಸ್.ಎಂ.ಪಟ್ಟಣಕರ್, ಲಗುಮಣ್ಣಾ ಕರಗುಪ್ಪಿ, ನಿಂಗಣ್ಣ ಜಗತಿ, ಶರಣಬಸಪ್ಪ ನರೋಣಿ, ರವಿಕುಮಾರ ಶಹಾಪುರಕರ್, ಸಾವಿತ್ರಿ ಪಾಟೀಲ್, ಕಲಾವತಿ ನೆಲೋಗಿ ಇದ್ದರು.
ರಾಷ್ಟ್ರ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸುರೇಖಾ ಡೆಂಗಿ, ಭುವನೇಶ್ವರಿ ಹಳ್ಳಿಖೇಡ, ದಿನಕರ ಮೂಲಗೆ, ಚಂದ್ರಕಾಂತ ಬಿರಾದಾರ, ಕಾವೇರಿ ಸಂಪಗಾಂವಕರ್, ಭವಾನಿ ಭಟ್, ರೇಣುಕಾ, ಗುರುಪಾದಪ್ಪ ಡೊಡ್ಮನಿ, ಸುವಣರ್ಾ ಲತಾ, ಚಂದ್ರಕಾಂತ ಹಿರೇಮಠ, ವಿಜಯಕುಮಾರ ಸೊರಪ್ಪನೂರ, ಮಹ್ಮದ್ ಅಲ್ತಾಫ್ ಹುಸೇನ್, ಸುರೇಶ, ಪರಮಾನಂದ ಸರಸಂಬಿ, ಸಂತೋಷ ವೇದಪಾಠಕ್, ಹುಸೇನಸಾಬ ವಡಗೇರಿ, ಸಿದ್ಧಣ್ಣ ಮರಗೋಳ, ರಾಜೇಶ್ವರಿ, ನಿಂಗಪ್ಪ ಮುಂಗೊಂಡಿ, ಶಿವಪುತ್ರಪ್ಪ ರದ್ದೇವಾಡಿ, ಶ್ರೀಶೈಲ ಪೂಜಾರಿ ಅವರನ್ನು ಗೌರವಿಸಲಾಯಿತು.