ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಚಿತ್ತಾಪುರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಸೋಮವಾರ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರಿಗೆ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ಶಿಕ್ಷಕರಿಗೆ ನ್ಯಾಯ ಒದಗಿಸಲು ಆಗ್ರಹ

ಚಿತ್ತಾಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಕುರಿತು 2017ರಿಂದ ಅಳವಡಿಸಿರುವ ಹೊಸ ವೃಂದ, ನಿಯಮಗಳಲ್ಲಿನ ಅವೈಜ್ಞಾನಿಕ ಅಂಶ ಕೈಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಒತ್ತಾಯಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, 2017ರ ವರೆಗೆ ನೇಮಕವಾದ ಶಿಕ್ಷಕರನ್ನು 1-7ನೆ ತರಗತಿಯ ಶಿಕ್ಷಕರೆಂದು ಪರಿಗಣಿಸಬೇಕು. 2017ರ ಸಿ ಆ್ಯಂಡ್ ಆರ್ ನಿಯಮ ಪೂರ್ವಾನ್ವಯಗೊಳಿಸಬಾರದು ಎಂದು ಆಗ್ರಹಿಸಿದರು.

1ರಿಂದ 7ನೇ ತರಗತಿಗೆ ನೇಮಕವಾದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ, 1ರಿಂದ 5ನೇ ತರಗತಿಗೆ ಸೀಮಿತ ಮಾಡುವುದು ಹಿಂಪಡೆಯಬೇಕು. ಅರ್ಹ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಗ್ರೇಡ್ - 2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಬಳುಂಡಗಿ, ಪ್ರಮುಖರಾದ ಅಬ್ದುಲ್ ಸಲೀಂ, ಹುಸೇನ್ ಪಾಷಾ, ಸ್ವರ್ಣಲತಾರೆಡ್ಡಿ ದುಗನೂರ, ಶರಣಪ್ಪ ಐಕೂರ್, ಶಿವಲೀಲಾ, ಈಶ್ವರ ಸಂಕನೂರ, ಲಕ್ಷö್ಮಣ್, ಶಿಕ್ಷಕರಾದ ಮಹ್ಮದ್ ಜಾವೀದ್, ಸೌದಪ್ಪ ಬಬಲಾದ್, ರಮೇಶ ಪತ್ತಾರ, ಸಿದ್ದರಾಮ ವಾಲಿ, ಬಸಪ್ಪ ಯಂಬತ್ನಾಳ, ಅನ್ನಪೂರ್ಣ, ಪಾರ್ವತಿ, ಜ್ಯೋತಿ, ಲಕ್ಷಿö್ಮÃ, ವಿಜಯಲಕ್ಷಿö್ಮÃ, ಸಾಧಿಕಾ, ಸುನೀತಾ, ಚಂದ್ರಾವತಿ, ಸುಶೀಲಾಬಾಯಿ, ಗುಂಡಮ್ಮ, ಸವಿತಾ, ಕಸ್ತೂರಿ, ರಾಜೇಶ್ವರಿ, ಜಯಶ್ರೀ, ಶ್ರೀದೇವಿ, ದೇವಪ್ಪ ನಂದೂರಕರ್, ಅಂಬಾದಾಸ್ ಇತರರಿದ್ದರು.