ಜಿಲ್ಲೆ

ಶಿಕ್ಷಕರಿಗೆ ನೆನಪಿನ ಕಾಣಿಕೆ ಕೊಟ್ಟ ವಿದ್ಯಾರ್ಥಿಗಳು

ಬೀದರ್: ನಗರದ ಬಸವನಗರದ ಗಂಗೋತ್ರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ನೆನಪಿನ ಕಾಣಿಕೆ ಕೊಟ್ಟರು.
ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಸಂಘಟಿಸಿದ್ದರು. ಕಾರ್ಯಕ್ರಮದ ಆಯೋಜನೆ, ಸ್ವಾಗತ, ನಿರೂಪಣೆ, ವಂದನಾರ್ಪಣೆಯನ್ನು ವಿದ್ಯಾರ್ಥಿಗಳೇ ಮಾಡುವ ಮೂಲಕ ಗಮನ ಸೆಳೆದರು.
ಶಿಕ್ಷಕರು ರಾಷ್ಟ್ರ ನಿರ್ಮಾಪಕರು:
ಶಿಕ್ಷಕರೇ ರಾಷ್ಟ್ರದ ನಿರ್ಮಾಪಕರು ಎಂದು ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಪಾಟೀಲ ಹೇಳಿದರು.
ಶಿಕ್ಷಕರು ಮುಗ್ಧ ಮಕ್ಕಳ ಮನಸ್ಸು ಅರಿತು ಬೋಧನೆ ಮಾಡುತ್ತಾರೆ. ಅವರನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುತ್ತಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಸಿದ್ದರಾಮಯ್ಯ ಹಿರೇಮಠ ನುಡಿದರು.
ಮುಖ್ಯಶಿಕ್ಷಕಿ ಕಲಾವತಿ ಪರಶೆಟ್ಟೆ, ಸನ್ಮುಕಯ್ಯ ಹಿರೇಮಠ, ರವಿಚಂದ್ರ ಮಠಪತಿ, ಕಿಶೋರ ಕುಲಕರ್ಣಿ, ಕವಿತಾ ಪರಶೆಟ್ಟೆ, ರಾಬಿನ್‍ಸನ್, ಸರಸ್ವತಿ ಶೀಲವಂತ, ಸಂತೋಷ ಕೊಪ್ಪೇರ್, ಸರಸ್ವತಿ, ನಾಗಮಣಿ, ಶ್ರೀದೇವಿ ಬಿರಾದಾರ, ಶಾಂತಾ ಹೂಗಾರ, ಉಷಾ ಮಾಳಗೆ, ಅಶೋಕ ಕಾಂಬಳೆ, ಸೋನಿ ಉಪಸ್ಥಿತರಿದ್ದರು. ಸುಜೇಂದ್ರ ಸ್ವಾಗತಿಸಿದರು. ಕೀರ್ತನಾ ನಿರೂಪಿಸಿದರು. ಶ್ರೇಯಾ ವಂದಿಸಿದರು.