ಕಟಕೋಳ ಕನಾರ್ಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಗಂಜಿ ಮಾತನಾಡಿದರು. ಎಂ.ಎಸ್.ಶಾಲದಾರ, ಎಸ್.ಡಿ.ಐನಾಪೂರ, ಈರಣ್ಣ ಕಾಕೂರ ಇತರರಿದ್ದರು. 
ಜಿಲ್ಲೆ

ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

ಕಟಕೋಳ: ಇಲ್ಲಿನ ಕನಾರ್ಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ವಿಜ್ಞಾನ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ ಕಟಕೋಳ ಸಂಯುಕ್ತಾಶ್ರಯದಲ್ಲಿ ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾ, ಮಿದುಳು ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಲಾಯಿತು.

ಐ.ಆರ್.ಗಂಜಿ ಮಾತನಾಡಿ, ಡೆಂಘೆ, ಚಿಕ್ಯೂನ್‌ಗುನ್ಯಾ, ಮಿದುಳು ಜ್ವರ, ಜೀಕಾ ವೈರಸ್ ರೋಗ ಲಕ್ಷಣಗಳು ಮತ್ತು ಹರಡುವಿಕೆ, ಅದರ ನಿಯಂತ್ರಣ, ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ವೈದ್ಯಾಧಿಕಾರಿ ಎಂ.ಎಸ್.ಶಾಲದಾರ ಉದ್ಘಾಟಿಸಿದರು. ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಐನಾಪೂರ ಪ್ರಾಸ್ತಾವಿಕ ಮಾತನಾಡಿದರು.

ಈರಣ್ಣ ಕಾಕೂರ ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು. ಪಾಂಡುರಂಗ ಜಟಗನ್ನರ ವಿ.ಎಸ್.ಯರಗುದ್ರಿ ಸೊಳ್ಳೆಗಳ ಜೀವನ ಚಕ್ರವನ್ನು ತಿಳಿಸಿದರು. ಎಸ್.ವಿ.ದೀವಟಗಿ ಇತರರಿದ್ದರು.