ವಿಶೇಷ ವರದಿ ತುಮಕೂರು
ಅನುದಾನಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ 2 ತಿಂಗಳಾದರು ಇನ್ನೂ ಸಂಬಳ ಕೈಸೇರಿಲ್ಲ. ೆಬ್ರವರಿ, ಮಾರ್ಚ್ ತಿಂಗಳ ವೇತನವೇ ಆಗಿಲ್ಲ.
ತಾಲೂಕಿನ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಏಪ್ರಿಲ್ ಮುಗಿಯುತ್ತಾ ಬಂದಿದ್ದರೂ ಇನ್ನೂ ಸಂಬಳ ಬಾರದೆ ಇರುವುದರಿಂದ ಸಂಸಾರದ "ಬಜೆಟ್' ಆಯ ತಪ್ಪಿದಂತಾಗಿದೆ. ಮಕ್ಕಳ ಶಾಲಾ&ಕಾಲೇಜು ಶುಲ್ಕ, ಸಾಲ ಕಟ್ಟಲು ಪರದಾಡುವಂತಾಗಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳಾದ ಕುಣಿಗಲ್, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕುಗಳ ಶಿಕ್ಷಕರಿಗೆ ವೇತನ ಆಗಿದೆ. ಆದರೆ, ಈವರೆಗೆ ತುಮಕೂರು ತಾಲೂಕು ಶಿಕ್ಷಕರ ಸಂಬಳ ಆಗಿಲ್ಲದಿರುವುದು ಶಿಕ್ಷಣ ಇಲಾಖೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅನುದಾನಿತ ಶಾಲೆಗಳನ್ನು ಹೊಂದಿರುವ ತಾಲೂಕು ತುಮಕೂರು.
15 ಹಿರಿಯ ಸರ್ಕಾರಿ ಪ್ರಾಥಮಿಕ ಹಾಗೂ 62 ಪ್ರೌಢಶಾಲೆಯ 200ಕ್ಕೂ ಹೆಚ್ಚು ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇದ್ದು 3 ಕೋಟಿ ರೂಪಾಯಿಗೆ ಸಂಬಳ ಬಿಡುಗಡೆಯಾಗಬೇಕಿದೆ. ಸರ್ಕಾರದ ಖಜಾನೆಯಿಂದ ಅನುದಾನ ಬಂದಿದೆಯಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳ ರ್ನಿಲಕ್ಷ$್ಯವಹಿಸಿರುವ ಕಾರಣ ಸಂಬಳ ಇನ್ನೂ ಶಿಕ್ಷಕರ ಖಾತೆಗೆ ಜಮಾ ಆಗಿಲ್ಲ. ಈವರೆಗೆ ಸಂಬಳವಿಲ್ಲದೇ ಶಿಕ್ಷಕರು ಪರದಾಡುವಂತಾಗಿದೆ.
ಯುಗಾದಿ ಸಂಭ್ರಮವೂ ಇಲ್ಲ: ೆಬ್ರವರಿಯಲ್ಲೇ ಸಂಬಳ ಬಾರದ ಕಾರಣ ಯುಗಾದಿ ಹಬ್ಬದ ಸಂಭ್ರಮವೂ ಇಲ್ಲದೇ ಶಿಕ್ಷಕರ ಮುಖವು ಕಳಾಹೀನಗೊಂಡಿತ್ತು. ಹಬ್ಬ ಇರಲಿ ಮಕ್ಕಳ ಶಾಲಾ&ಕಾಲೇಜು ಶುಲ್ಕ, ಸಾಲಸೋಲ ಮಾಡಿ ಮನೆಕಟ್ಟಿಕೊಂಡಿರುವ ಶಿಕ್ಷಕರು ಪ್ರತಿ ತಿಂಗಳ ಸಾಲದ ಕಂತು ಕಟ್ಟಲು ಅವರಿವರ ಬಳಿ ಕೈಚಾಚಬೇಕಾದ ದು@ಸ್ಥಿತಿಗೆ ಸಿಲುಕಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಸ್ಸೆಸ್ಸೆಲ್ಸಿ ಪರೀೆ, ಮೌಲ್ಯಮಾಪನ ಹೀಗೆ ಸಾಕಷ್ಟು ಕಾರ್ಯ ಬಾಹುಳ್ಯದಲ್ಲಿ ಸಿಲುಕಿರುವ ಶಿಕ್ಷಕರಿಗೆ ಸಂಬಳ ಬಾರದೆ ಮತ್ತಷ್ಟು ಒತ್ತಡಕ್ಕೆ ಸಿಲುಕುವಂತಾಗಿದೆ.
ೆಬ್ರವರಿ ತಿಂಗಳ ಸಂಬಳ ಏಪ್ರಿಲ್ ಕೊನೆವಾರವಾದರೂ ಬಂದಿಲ್ಲ. ಮಕ್ಕಳ ಶಾಲಾ&ಕಾಲೇಜು ಶುಲ್ಕ ಕಟ್ಟಬೇಕು. ಅಲ್ಲದೆ, ಸಾಲದ ಕಂತುಗಳನ್ನು ಪಾವತಿಸಬೇಕು. ಅದಕ್ಕಾಗಿ ಬೇರೆಯವರ ಬಳಿ ಸಾಲಕ್ಕೆ ಕೈಚಾಚಬೇಕಿದೆ. ಇಲಾಖೆ ಅಧಿಕಾರಿಗಳಿಗೆ ನಮ್ಮ ಕೂಗು ಕೇಳಿಸುವುದಿಲ್ಲ.
| ಹೆಸರು ಹೇಳಲಿಚ್ಛಿಸದ ಶಿಕ್ಷಕರು
ತಾಲೂಕಿನ ಅನುದಾನಿತ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿಗೆ ಇನ್ನೂ ೆಬ್ರವರಿ, ಮಾರ್ಚ್ ತಿಂಗಳ ವೇತನ ಆಗಿಲ್ಲ. ಸಂಬಳಕ್ಕೆ ಪ್ರತಿ ತಿಂಗಳು 3 ಕೋಟಿ ರೂ. ಬೇಕಿದ್ದು, ಸರ್ಕಾರದಿಂದ ಅನುದಾನದ ಬಿಡುಗಡೆ ತಡವಾಗಿತ್ತು. 7ನೇ ವೇತನ ಆಯೋಗದ ಹೆಚ್ಚುವರಿ ವ್ಯತ್ಯಾಸ ಹಣ ಹೊಂದಿಸಿಕೊಳ್ಳಬೇಕಿತ್ತು. ಈಗ ಅನುದಾನ ಬಂದಿದ್ದು, ತಾಲೂಕು ಪಂಚಾಯಿತಿಗೆ ಬಿಲ್ಗಳನ್ನು ಸಲ್ಲಿಸಿ ಈ ತಿಂಗಳಾಂತ್ಯದೊಳಗೆ ಶಿಕ್ಷಕರ ಖಾತೆಗೆ ಸಂಬಳ ಜಮಾ ಮಾಡಲಾಗುವುದು.
| ಹನುಮಂತಪ್ಪ ಬಿಇಒ ತುಮಕೂರು