ಚಿತ್ರದುರ್ಗ: ಆಳ ಅಧ್ಯಯನದ ಮೂಲಕ ಪಠ್ಯದ ಮರು ಮನನಕ್ಕೆ ಶಿಕ್ಷಕರು ಮುಂದಾಗಬೇಕು ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ತಿಳಿಸಿದರು.
ನಗರದ ಡಯಟ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಾಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ 1ರಿಂದ 10ನೇ ತರಗತಿ ಪಠ್ಯಪುಸ್ತಕ ಅಧ್ಯಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪರಿಣಾಮಕಾರಿಯಾಗಿ ನಡೆಸಲು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ವಿಷಯವಾರು ತರಬೇತಿ ನೀಡಲಾಗುತ್ತಿದೆ ಎಂದರು.
ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಿವಿಧ ರೀತಿಯ ವಿಧಾನ, ತಂತ್ರಗಳನ್ನು ಅಳವಡಿಸಿಕೊಂಡು ಬೋಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರ ಮಾರ್ಗದರ್ಶನದಂತೆ ಜಿಲ್ಲಾ ಮತ್ತು ಬ್ಲಾಕ್ ಹಂತದ ಅನುಷ್ಠಾನಾಧಿಕಾರಿಗಳಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಉಪ ಪ್ರಾಚಾರ್ಯ ಅಶ್ವಥ್‌ನಾರಾಯಣ, ಹಿರಿಯ ಉಪನ್ಯಾಸಕರಾದ ಪೂರ್ಣಿಮಾ, ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಎನ್.ರಾಘವೇಂದ್ರ, ಸಿ.ಎಸ್.ಲೀಲಾವತಿ, ವಿ.ಕನಕಮ್ಮ,ನಿತ್ಯಾನಂದ, ಶಿವಲೀಲಾ, ರೇವಣ್ಣ, ರಂಗಸ್ವಾಮಿ, ಕಚೇರಿ ಅಧೀಕ್ಷಕ ದೇವೇಂದ್ರಪ್ಪ ಇದ್ದರು.