ಬಸವಕಲ್ಯಾಣ: ತಾಲೂಕಿನ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಮಾನೆ ಹೇಳಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಬಸವಕಲ್ಯಾಣ ಮತ್ತು ಹುಲಸೂರು ತಾಲೂಕು ಘಟಕದ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಯಾವುದೇ ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು ಎಂದರು.
ಹುಲಸೂರು ತಾಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಿಕ್ಷಕರ ಸಂಘಗಳು ಸಮನ್ವಯದಿಂದ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಜತೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿಯೂ ಎಲ್ಲರೂ ಕಾಳಜಿ ವಹಿಸಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿರ ಸಂಘದ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಪಂಚಾಳ, ಸರ್ಕಾರಿ ನೌಕರರ ಸಂಘದ ಹುಲಸೂರು ಘಟಕದ ಅಧ್ಯಕ್ಷ ನಾಗರಾಜ ಹಾವಣ್ಣ, ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರ ಪತಂಗೆ ಮಾತನಾಡಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಸಂಘನಾ ಕಾರ್ಯದರ್ಶಿ ಸುಧಾಕರ್ ಮುಳೆ, ವೀರೇಶ ಹೆಗ್ಗೆ, ಕೃಷ್ಣಾರೆಡ್ಡಿ, ಮಲ್ಲಿಕಾರ್ಜುನ ಬೆಳಗಲ, ಉದ್ದವರಾವ ಉಪಾಸೆ, ಮಾಧವ ಗಣೇಶ, ಸಿದ್ದಾರ್ಥ ಪೋಸ್ತೆ, ಉಷಾ ಬಂದೆ, ಸುಜಾತ ಕೈರಾಟ್ಕರ್, ಸರೋಜಿನಿ ಮುನ್ನೊಳೆ, ಬಜರಂಗ ಕಾಂಬಳೆ, ಸಿದ್ಧೋಧನ್, ಸಂಜೀವ ರೆಡ್ಡಿ, ಗುರುನಾಥ ಜಾಧವ್, ಆನಂದ್ ಪತ್ತಾರ್, ವೀರೇಶ ಆಲದಳ್ಳಿ, ಸಿದ್ದಾರ್ಥ ಪೋಸ್ತೆ, ರಾಜಶೇಖರ ಹೊಸಮನಿ, ವಿಜಯಕುಮಾರ ಪಟ್ನೆ, ಜಟ್ಟೆಪ್ಪ ಕುಕನೂರ, ಭೀಮಾಶಂಕರ ಅದೆಪ್ಪ, ರಾಜಕುಮಾರ, ವಿಜಯಕುಮಾರ ವಾಡೇಕರ್, ಮಲ್ಲಿಕಾರ್ಜುನ ನಾಯಕ ಇತರರಿದ್ದರು. ಬಸವರಾಜ ಮಾನೋಳೆ ನಿರೂಪಣೆ ಮಾಡಿದರು. ಮದನಕುಮಾರ ಪಾಟೀಲ್ ವಂದಿಸಿದರು.
ಸನ್ಮಾನ: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ಹಾಗೂ ಗ್ರೇಡ್ -೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಹುಲಸೂರು ತಾಲೂಕು ಘಟಕದ ನೂತನ ಪದಾದಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.