ಜಿಲ್ಲೆ

ಶಿಕ್ಷಕರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸುವೆ ಎಂಎಲ್‌ಸಿ ಶ್ರೀನಿವಾಸ್

ಚಿತ್ರದುರ್ಗ: ಸ್ವಾತಂತ್ರೃಬಂದಾಗಿನಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿರಲಿಲ್ಲ, ಆದರೆ ಮತದಾರರು ಕೈ ಹಿಡಿದಿರುವುದರಿಂದ ಪಕ್ಷ ಜ ಯ ಸಾಧಿಸಿದೆ ಎಂದು ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯ ಡಿ.ಟಿ.ಶ್ರೀನಿವಾಸ್ ಹೇಳಿದರು. ಚುನಾವಣೆಯಲ್ಲಿ ಗೆಲುವು ಸಾಧಿ ಸಿದ ಬಳಿ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾಯ್ದೆಗಳು ಪರಿಷತ್‌ನಲ್ಲೂ ಪಾಸಾಗ ಬೇಕೆಂದರೆ ಪಕ್ಷದ ಬಲ ಹೆಚ್ಚಿರಬೇಕು. ತಮ್ಮ ಗೆಲುವು ಎಲ್ಲರ ಸಹಕಾರವಿದೆ ಎಂದರು.
ತಮ್ಮ ವಿರುದ್ಧ ಸಾಕಷ್ಟು ಅಪ್ರಚಾರ ನಡೆಯಿತು. ನನ್ನ ಹಾಗೂ ನನ್ನ ಪತ್ನಿ ಮಾಜಿ ಶಾಸಕಿ ಪೂರ್ಣಿಮಾ ಅವರ ನಡುವೆ ಭಿನ್ನಾಭಿಪ್ರಾಯಕ್ಕೂ ಪ್ರಯತ್ನಿಸಿದರು. ನೇರ ಮಾತನಾಡುವ ಸ್ವಭಾವ ನನ್ನದೆಂದು ಶ್ರೀನಿವಾಸ್,ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಶಾಸಕ ಕೆ.ಸಿ.ವಿರೇಂದ್ರಪಪ್ಪಿ ಅವರು ಮಾತನಾಡಿ,ಚಿತ್ರದುರ್ಗದಲ್ಲಿ ಕಳೆದ 30 ವರ್ಷಗಳಿಂದ ಶಾಸಕರು,18 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರು ಇರಲಿಲ್ಲವೆಂದು ಹಿಂದಿನ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಹಿಂದಿನ ಎಂಎಲ್‌ಸಿ ಎ.ನಾರಾಯಣಸ್ವಾಮಿ ಅವರ ಕಾರ‌್ಯವೈಖರಿ ಟೀಕಿಸಿದರು. ತಾಪಂ,ಜಿಪಂ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.
ಮಾಜಿ ಶಾಸಕಿ ಕೆ.ಪೂರ್ಣಿಮಾ ಅವರು ಮಾತನಾಡಿ,ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ನಾನು ಪ್ರತಿಸ್ಪರ್ಧಿಗಳಾಗಿದ್ದೆವು. ಈಗ ಒಂದೇ ಪಕ್ಷದಲ್ಲಿದ್ದು,ಹೊಂದಾಣಿಕೆಯಿಂದ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು. ಡಿಸಿಸಿ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿದರು.
ಹಾಲಸ್ವಾಮಿ,ಗೀತಾನಂದಿನಿಗೌಡ,ರಘು,ಕೆ.ಸಿ.ನಾಗರಾಜ್,ಸಂಪತ್‌ಕುಮಾರ್,ಡಿ.ಎನ್.ಮೈಲಾರಪ್ಪ,ಶಿವಣ್ಣ,ಲಕ್ಷ್ಮೀಕಾಂತ,ವೆಂಕಟೇಶ್,ಬಾಲ ರಾಜ್,ಆರ್.ಕೆ.ಸರ್ದಾರ,ಮಧುಗೌಡ,ಪ್ರಕಾಶ್‌ನಾಯ್ಕ,ಹನೀಫ್,ಖುದ್ದ್ದೂಸ್,ಪಾತಣ್ಣ,ಸಿ.ಟಿ.ಕೃಷ್ಣಮೂರ್ತಿ,ಎಚ್.ಮಂಜಪ್ಪ ಸೇರಿ ಮತ್ತಿತರರು ಇದ್ದರು. ಕಾರ‌್ಯಕ್ರಮಕ್ಕೂ ಮುನ್ನ ವೀರೇಂದ್ರಪಪ್ಪಿ,ಡಿ.ಟಿ.ಶ್ರೀನಿವಾಸ್ ಮತ್ತಿತರರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.