ಮಾರ್ಗೋನಹಳ್ಳಿಯ ಶ್ರೀ ಮರಡಿಲಿಂಗೇಶ್ವರ ದೇವಸ್ಥಾನದ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು. ಮಂಜುನಾಥ್, ಡಾ.ಕೆ.ಎಸ್.ಚಂದ್ರು ಕಾಡುಮೆಣಸ, ರಾಜಮ್ಮ, ಮಲ್ಲಿಕಾರ್ಜುನಸ್ವಾಮಿ, ಡಿ.ಕೆ.ಪ್ರದೀಪ್, ಸತೀಶ್, ಕೆ.ಮಹೇಶ್, ಜ್ಯೋತಿ, ರಾಧಮ್ಮ ಇದ್ದರು. 
ಜಿಲ್ಲೆ

ಶಿಕ್ಷಕ ಸಂಸ್ಕೃತಿಯ ಪ್ರತಿಬಿಂಬ

ಕೆ.ಆರ್.ಪೇಟೆ: ಶಿಕ್ಷಕರ ವೃತ್ತಿಯ ಪಾವಿತ್ರೃವನ್ನು ಎತ್ತಿ ಹಿಡಿದ ಕೀರ್ತಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ದಮ್ಮನಿಂಗಳ ಮಂಜುನಾಥ್ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಮಾರ್ಗೋನಹಳ್ಳಿಯ ಶ್ರೀಮರಡಿಲಿಂಗೇಶ್ವರ ದೇವಸ್ಥಾನದ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ದೇಶದ ವ್ಯವಸ್ಥೆ ಸುಸೂತ್ರವಾಗಿ ಮುಂದುವರಿಯಲು ಗುರು ಪರಂಪರೆ ಕಾರಣವಾಗಿದೆ. ಸಮಾಜದಲ್ಲಿ ಶಿಕ್ಷಕರಿಲ್ಲದಿದ್ದರೆ ಅನಾಗರಿಕತೆ ಹೆಚ್ಚುತ್ತದೆ. ಸಂಸ್ಕೃತಿಯ ಪ್ರತಿಬಿಂಬ ಶಿಕ್ಷಕ. ಹೀಗಾಗಿ ಭಾರತದ ಪರಂಪರೆಯಲ್ಲಿ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ವ್ಯವಸ್ಥೆ ಇದೆ ಎಂದರು.

ಶಾಲೆಯ ಶಿಕ್ಷಕ ಹಾಗೂ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ.ಕೆ.ಎಸ್.ಚಂದ್ರು ಕಾಡುಮೆಣಸ ನೇತೃತ್ವದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.

ಹಿರೀಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ, ನಿಲಯ ಪಾಲಕ ಡಿ.ಕೆ.ಪ್ರದೀಪ್, ಶಾಲೆಯ ಶಿಕ್ಷಕ-ಪೋಷಕ ಪರಿಷತ್ ಸದಸ್ಯರಾದ ಸತೀಶ್, ಕೆ.ಮಹೇಶ್, ಜ್ಯೋತಿ, ಪಾಲಕಿ ರಾಧಮ್ಮ ಇತರರಿದ್ದರು.