ಹುಕ್ಕೇರಿ: ಯೋಧ, ರೈತ ಎರಡು ಕಣ್ಣಗಳಾದರೆ, ಶಿಕ್ಷಕ ಶಿವನ ಮೂರನೇ ಕಣ್ಣು ಇದ್ದಂತೆ. ಅದರಲ್ಲಿ ಯಾವ ಕಣ್ಣು ನಿರ್ಲಕ್ಷಿಸಿದರೂ ದೇಶದ ಅಭಿವೃದ್ಧಿಗೆ ಮಾರಕ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಳವಿ ಗ್ರಾಮದಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆಯಡಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಎರಡು ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳಬೇಕು. ಇತ್ತೀಚೆಗೆ ಡಿಜಟಲೀಕರಣ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳನ್ನು ಅದಕ್ಕೆ ಸ್ಪಂದಿಸುವಂತೆ ತಯಾರು ಮಾಡಬೇಕು. ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ ಬೋಸಬೇಕು. ಸರ್ಕಾರಿ ಶಾಲೆಗಳಿಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿದಲ್ಲಿ ಖಾಸಗಿ ಶಾಲೆಗಳತ್ತ ಪಾಲಕರು ಹೋಗುವುದಿಲ್ಲ ಎಂದರು.
ಬಿಇಒ ಪ್ರಭಾವತಿ ಪಾಟೀಲ ಮಾತನಾಡಿ, ಶಾಲಾ ಪ್ರಾರ್ಥನಾ ವೇಳೆಯಲ್ಲಿ ಸಂವಿಧಾನ ಪೀಠಿಕೆ ತಿಳಿಸಿಕೊಡಲಾಗುತ್ತಿದೆ. ಇದರಿಂದ ಭವಿಷ್ಯದ ಪ್ರಜೆಗಳಿಗೆ ದೇಶದ ಕಾನೂನಿನ ಅರಿವು ಮೂಡಿಸಲು ಸಾಧ್ಯ ಎಂದರು. ಹಿರಾ ಶುಗರ್ಸ್ ಎಂಡಿ ಎಸ್.ಆರ್.ಕರ್ಕಿನಾಯಿಕ ಕಲಿತ ಶಾಲೆಗೆ ದೇಣಿಗೆ ರೂಪದಲ್ಲಿ ಟಿವಿ ನೀಡಿದರು. ನಂತರ ರಮೇಶ ಕತ್ತಿ ಮತ್ತು ಬಿಇಒ ಪ್ರಭಾವತಿ ಪಾಟಿಲ ಅವರನ್ನು ಸತ್ಕರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ, ಉಪಾಧ್ಯಕ್ಷೆ ಶೋಭಾ ಘಸ್ತಿ, ಬಿಜೆಪಿ ರೆತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಮೇಶ ಕುಲಕರ್ಣಿ, ಹಿರಾ ಶುಗರ್ಸ್ ನಿರ್ದೇಶಕ ಬಸವರಾಜ ಮರಡಿ, ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ನಾಯಿಕ, ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪುರೆ, ರಾಮಣ್ಣ ತೇರದಾಳಿ, ಚನ್ನಮಲ್ಲ ನಾಯಿಕ, ಮಹಾದೇವ ಕ್ಷೀರಸಾಗರ, ಅನಿಲ ಖಾನಾಯಿ, ಸುರೇಶ ಖಡಕಬಾವಿ, ಸಿ.ಆರ್.ಪಿ ಜಗದೀಶ, ಮುಖ್ಯಶಿಕ್ಷಕರಾದ ಎಸ್.ಡಿ.ನಾಯಿಕ, ಬಿ.ಬಿ.ಅಂಗಡಿ ಇತರರು ಇದ್ದರು.