ಕೆಂಭಾವಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಈ ವೃತ್ತಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ಅಷ್ಟೇ ಗೌರವ ಲಭಿಸುತ್ತದೆ ಎಂದು ಶಿಕ್ಷಕಿ ಜಯಶ್ರೀ ಹಿರೇಮಠ ಹೇಳಿದರು. ಪಟ್ಟಣದ ಸ್ಪಂದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿz್ದೆÃವೆ. ಇಂತಹ ಪವಿತ್ರವಾದ ವೃತ್ತಿ ಎಲ್ಲರಿಗೂ ದೊರಕುವುದಿಲ್ಲ.
ಶಿಕ್ಷಕರು ದಿನದಿಂದ ದಿನಕ್ಕೆ ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಪಾಠ ಮಾಡಬೇಕು ಎಂದು ಹೇಳಿದರು. ಶಿಕ್ಷಕ ಬಂದೇನವಾಜ್ ನಾಲತವಾಡ ಮಾತನಾಡಿದರು. ಸಂಸ್ಥೆ ಕರ‍್ಯದರ್ಶಿ ಡಿ.ಸಿ.ಪಾಟೀಲ್, ಮುಖ್ಯಗುರು ರೇವಣಸಿದ್ದಯ್ಯ ಮಠ ಇತರರಿದ್ದರು.