ಅಥಣಿ ಗಚ್ಚಿನಮಠದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರನ್ನು ಸತ್ಕರಿಸಲಾಯಿತು. ಶಿವಬಸವ ಸ್ವಾಮೀಜಿ,ಬಾಳಾಸಾಹೇಬ ಲೊಕಾಪುರ, ಎಂ.ಬಿ.ಮೊರಟಗಿ, ಜಿ.ಎಂ.ಹಿರೇಮಠ ಇತರರಿದ್ದರು. 
ಜಿಲ್ಲೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ

ಅಥಣಿ: ಶಿಕ್ಷಕ, ರೈತ, ಸೈನಿಕ ದೇಶದ ಮೂರು ಕಣ್ಣುಗಳಿಂದ್ದಂತೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.


ಇಲ್ಲಿನ ಗಚ್ಚಿನಮಠದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತವಾಗಿದೆ. ಶಿಕ್ಷಕ ಕೇವಲ ವೃತ್ತಿಯಲ್ಲ ಅದೊಂದು ಸಾಮಾಜಿಕ ಹೊಣೆಗಾರಿಕೆ ಎಂದರು.


ಸಾಹಿತಿ ಡಾ.ಬಾಳಾಸಾಹೇಬ ಲೊಕಾಪುರ ಮಾತನಾಡಿ, ಉತ್ತಮ ಪ್ರಜೆಗಳನ್ನು ದೇಶಕ್ಕೆ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು.
ಸಾಧಕ ಶಿಕ್ಷಕ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸತ್ಕರಿಸಲಾಯಿತು. ಬಿಇಒ ಎಂ.ಬಿ.ಮೊರಟಗಿ, ಉಪತಹಸೀಲ್ದಾರ್ ಮಹಾದೇವ ಬಿರಾದಾರ, ಗೌಡಪ್ಪ ಖೋತ, ಸುರೇಶ ಪಾಟೀಲ, ಜಿ.ಎಂ.ಹಿರೇಮಠ, ಎಸ್.ಎಂ.ರಾಠೋಡ, ಬಿ.ಎಲ್.ಪೂಜಾರಿ, ಎನ್.ಬಿ.ಸವದಿ, ಎಸ್.ಪಿ.ಮೆಗೆಣವರ ಇದ್ದರು.