ಯಾದಗಿರಿ: ಒಬ್ಬ ವ್ಯಕ್ತಿ ಸವರ್ಾಂಗಿಣ ಅಭಿವೃದ್ಧಿಗೆ ಶ್ರಮಿಸುವ ಶಿಕ್ಷಕ ವರ್ಗಕ್ಕೆ ಸಮಾಜದಲ್ಲಿ ಉನ್ನತ ಸ್ಥಾನವಿದ್ದು, ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದು ವಲಯ ಸಂಪನ್ಮೂಲ ವ್ಯಕ್ತಿ ಶೇಖರಪ್ಪ ಅರಿಕೇರಿ ತಿಳಿಸಿದರು.
ತಾಲೂಕಿನ ವಿರುಪಾಪುರ ಗ್ರಾಮದಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ಹಣಮಂತ ಕಾಂಬ್ಳೆಗೆ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಇಂದಿಗೂ ಸಾರಿಗೆ ಸಂಪರ್ಕ ಇಲ್ಲದೆ ಈ ಗ್ರಾಮದಲ್ಲಿ ಎರಡುವರೆ ದಶಕದಿಂದ ಸಾವಿರಾರು ವಿದ್ಯಾಥರ್ಿಗಳ ಶೈಕ್ಷಣಿಕ ಭವಿಷ್ಯ ರೂಪಿಸಿದ ಹಣಮಂತ ಅವರ ಸೇವೆ ಅಮೋಘವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂಬ್ಳೆ, ನಾನು ಶಿಕ್ಷಕನಾಗಿ ಮೊದಲು ಶಾಲೆಗೆ ಬಂದಾಗ ಈ ಊರಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಸರಿಯಾದ ರಸ್ತೆ ವ್ಯವಸ್ಥೆ ಇರಲಿಲ್ಲ, ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಿರಲಿಲ್ಲ. ನಾನು ಬರುವಾಗ 3 ಬೀಜಗಳನ್ನು ತೆಗೆದುಕೊಂಡು ಬಂದಿದ್ದೆ. ಒಂದು ಅಕ್ಷರದ ಬೀಜ, ಮೂಡನಂಬಿಕೆಯ ವಿರೋ ಬೀಜ ಹಾಗೂ ಹಳ್ಳಿಯಲ್ಲಿ ವ್ಯಾಪಕವಾಗಿ ಹಬ್ಬಿದ್ದ ಬಾಲ್ಯ ವಿವಾಹ ನಿಮರ್ೂಲನೆ ಬೀಜ ಈ ಮೂರಲ್ಲಿ ಅಕ್ಷರದ ಬೀಜ ಮಾತ್ರ ಚಿಗುರೊಡೆದಿದೆ ಎಂದು ಹೇಳಿದರು.
ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನನ್ನಿಂದ 25500 ರೂ.ಗಳ ಸಹಾಯ ಮಾಡುತ್ತಿರುವೆ ಎಂದ ಅವರು, ಈ ಶಾಲೆಯಲ್ಲಿ ಶಿಕ್ಷಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದು ತಿಳಿಸಿದರು.
ಮುಖ್ಯಗುರು ಹಣಮಂತ್ರಾಯ ಹೂಗಾರ, ಪ್ರಮುಖರಾದ ಬಸನಗೌಡ ಮಾಲೀ ಪಾಟೀಲ, ಲಿಂಗಣ್ಣ ಪಡಿಶೆಟ್ಟಿ, ಮೈಲಾರಪ್ಪ ಪೂಜಾರಿ, ಸಾಯಬಣ್ಣ ಪುರ್ಲೆ, ಮಲ್ಲಪ್ಪ, ಪ್ರದೀಪ ಪುರ್ಲೆ ಇದ್ದರು.