ವಿಜಯವಾಣಿ ಸುದ್ದಿಜಾಲ ಧಾರವಾಡ
ವರ್ತಮಾನ ಕಾಲದ ಶಾಸನಗಳನ್ನು ರಕ್ಷಿಸಿ ಅಧ್ಯಯನ ನಡೆಸುವ ಕಾರ್ಯ ವಿಳಂಬವಾಗಬಾರದು. ಶಾಸನ ಅಧ್ಯಯನಕಾರರು ಪೂರ್ವಾಗ್ರಹ ಪೀಡಿತರಾಗಿ ಅಧ್ಯಯನ ಮಾಡಬಾರದು. ಅವುಗಳನ್ನು ಮರುಮೌಲ್ಯೀಕರಣ ಮಾಡುವ ಅವಶ್ಯಕತೆ ಇದೆ ಎಂದು ಜಾನಪದ ವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
ಕರ್ನಾಟಕ ಶಾಸನ ಸಾಹಿತ್ಯ ಪರಿಷತ್, ಜನತಾ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಜೆಎಸ್ಎಸ್ ಕಾಲೇಜು ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ ಮಹಾ-ಧಿವೇಶನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಾಗಾರ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಮಾತನಾಡಿ, ಪತ್ರಾಗಾರ ಇಲಾಖೆ ಮೂಲಕ ಐತಿಹಾಸಿಕ ಆಕರಗಳ ಸಂಗ್ರಹ ಮತ್ತು ರಣೆ ಮಾಡಲಾಗುತ್ತಿದೆ. ಐತಿಹಾಸಕ ಆಕರ ಮತ್ತು ಸ್ಮಾರಕಗಳ ರಕ್ಷಣೆಗೆ ಯುವ ಪಡೆ ಸಿದ್ಧವಾಗಬೇಕು ಎಂದರು.
ಸಮ್ಮೇಳನ ಸರ್ವಾಧ್ಯ ಡಾ. ಡಿ.ವಿ ಪರಮಶಿವಮೂತಿರ್ ಮಾತನಾಡಿ, ಯುವ ಮನಸ್ಸುಗಳಿಂದ ಶಾಸನಗಳ ಹುಡುಕುವಿಕೆ ಹೆಚ್ಚಾಗಬೇಕು. ಸಂಶೋಧಕರಿಂದ ಹೆಚ್ಚೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಬೇಕು. ಮಂಡಿತ ಲೇಖನಗಳನ್ನು ವಾಷಿರ್ಕ ಸಂಚಿಕೆಯಲ್ಲಿ ಪ್ರಕಟಿಸಬೇಕು ಎಂದರು.
ಹನುಮಾ ಗೋಗಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ. ಕೊಟ್ರೇಶ, ಡಾ. ದೇವರಕೊಂಡಾರೆಡ್ಡಿ, ಡಾ. ಆರ್. ಶೇಜೇಶ್ವರ, ಡಾ. ಎಸ್.ಸಿ ಪಾಟೀಲ, ಪ್ರೊ. ಬಿ.ಎಸ್. ಹಿರೇಮಠ, ಡಾ. ಜೆ.ಎಂ. ನಾಗಯ್ಯ, ಪ್ರೊ.ಅಮರೇಶ ಯತಗಲ್, ಡಾ. ಲೋಕೇಶ, ಡಾ. ಸೂರಜ ಜೈನ್, ಮಹಾವೀರ ಉಪಾಧ್ಯೆ, ಡಾ. ಬಿ.ಎನ್. ಭಾವಿ, ಡಾ. ಧನವಂತ ಹಾಜವಗೋಳ, ಡಾ. ಆರ್.ವಿ. ಚಿಟಗುಪ್ಪಿ, ಡಾ. ಎಚ್. ವಿಷ್ಣುವರ್ಧನ, ಇತರರು ಇದ್ದರು.
ಡಾ. ಎಸ್.ಕೆ ಮೇಲಕಾರ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.