ಜಿಲ್ಲೆ

ಶಾಸಕರು ವರ್ಗಾವಣೆ ದಂಧೆ ಹೇಳಿಕೆ: ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ

ಹಾಸನ: ಜಲ ಜೀವನ್ ಮಿಷನ್ ಮಷೀನ್ ಕಾಮಗಾರಿಯ ಗುತ್ತಿಗೆದಾರರಿಂದ ಪೂಜಾ ಕಾರ್ಯಕ್ರಮಕ್ಕೆ ಹೋಗಲು ಪಸೆರ್ಂಟೇಜ್ ಕೇಳುವ ಶಾಸಕರು ವರ್ಗಾವಣೆ ದಂಧೆ ಹೇಳಿಕೆ ನೀಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಶಾಸಕ ಸಿಮೆಂಟ್ ಮಂಜು ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದವರು ಅಧಿಕಾರಿಗನ್ನ ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಅದನ್ನು ಬಿಟ್ಟು ವರ್ಗಾವಣೆ ದಂದೆ ನಡೆಯುತ್ತಿದೆ ಎಂಬ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ.ಯಾವ ಅಧಿಕಾರಿಗಳು ಹಣಕೊಟ್ಟು ಬಂದಿದ್ದಾರೆ. ಯಾವ ಅಧಿಕಾರಿಗಳು ಏಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಶಾಸಕರು ಕೇವಲ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರೆ ಕೆಲಸವಾಗುವುದಿಲ್ಲ, ಅದನ್ನು ಹಿಂಬಾಲಿಸಿ ಕೆಲಸ ಮಾಡಿಸಬೇಕು, ನಾವು ಖಾಲಿ ಇರುವ ಜಾಗಗಳಿಗೆ ಅಧಿಕಾರಿಗಳನ್ನ ಸರ್ಕಾರದಿಂದ ನೇಮಿಸಿ ಕೊಡುವಂತೆ ಕೇಳಿಕೊಂಡಿದ್ದೇವೆ, ಅದರಂತೆ ಕೆಲವರನ್ನ ಸರ್ಕಾರದಿಂದ ನೇಮಕ ಮಾಡಲಾಗಿದೆ. ಶಾಸಕರಾದವರು ಜವಾಬ್ದಾರಿಯುತ್ತದಿಂದ ವರ್ತಿಸಬೇಕು. ಅಲ್ಲದೇ ಮಾತನಾಡುವಾಗ ಸಾಮಾನ್ಯ ಜ್ಞಾನಇಟ್ಟುಕೊಂಡು ಮಾತನಾಡಬೇಕು. ಈ ರೀತಿ ಬೇಜವಾಬ್ದಾರಿತನದಿಂದ ಹೇಳಿಕೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಂಧೆ ಎಂಬ ಪದಕ್ಕೆ ಸರಿಯಾದ ಅರ್ಥವನ್ನು ಶಾಸಕರೇ ಹೇಳಬೇಕು. ತಾಲೂಕಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ನನಗೂ ಕೂಡ ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನರು 43ಸಾವಿರ ಮತ ನೀಡಿದ್ದಾರೆ. ಅವರ ಸೇವೆಯನ್ನು ಮಾಡುತ್ತಿದ್ದೇನೆ. ಶಾಸಕರು ಕ್ಷೇತ್ರದ ಪ್ರಥಮ ಪ್ರಜೆಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಬೇಕು. ನಾನು ಕೂಡ ಸರ್ಕಾರದಲ್ಲಿ ಒಂದು ಭಾಗವಾಗಿದ್ದೇನೆ. ಗ್ಯಾರಂಟಿ ಸಮಿತಿಯ ಅಧ್ಯಕ್ಷನಾಗಿದ್ದು, ಶಿಷ್ಟಾಚಾರದ ಪ್ರಕಾರ ನನಗೆ ಆಹ್ವಾನವಿರುತ್ತದೆ ಇದನ್ನು ಅವರು ಅರಿಯಬೇಕು ಎಂದು ಟಾಂಗ್ ನೀಡಿದರು.