ಕೆ.ಆರ್.ನಗರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸವಿತಾ ಸಮಾಜ ಮತ್ತು ಕೇಶಾಲಂಕಾರಿಗಳ ಸಂಘದ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಶಾಸಕರಿಗೆ ಸವಿತಾ ಸಮಾಜದಿಂದ ಸನ್ಮಾನ

ಕೆ.ಆರ್.ನಗರ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸವಿತಾ ಸಮಾಜ ಮತ್ತು ಕೇಶಾಲಂಕಾರಿಗಳ ಸಂಘದಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ನಮ್ಮ ಸಮಾಜ ಸೇರಿದಂತೆ ಸಣ್ಣಪುಟ್ಟ ಸಮಾಜಗಳು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡಿದ್ದಾರೆ. ಇಂಥ ಸಮುದಾಯಗಳ ಅಭಿವೃದ್ಧಿ ಮತ್ತು ರಕ್ಷಣೆ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ ಎಂದರು.
ಮುಂದಿನ ದಿನಗಳಲ್ಲಿ ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಮನವಿ ಮಾಡಿದರು. ಕ್ಷೌರಿಕ ವೃತ್ತಿ ಮಾಡುವವರಿಗೆ ಉತ್ತಮವಾದ ಯೋಜನೆಯನ್ನು ಜಾರಿಗೆ ತಂದು ಅವರ ಆರ್ಥಿಕ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಕಾರಣ ಕರ್ತರಾಗಬೇಕು ಎಂದು ಕೋರಿದರಲ್ಲದೆ ಸಮಾಜದ ಮುಖಂಡರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಕೆ.ಆರ್.ನಗರ ಕ್ಷೇತ್ರದಲ್ಲಿರುವ ಸವಿತಾ ಸಮಾಜದ ಜನರು ರವಿಶಂಕರ್ ಅವರನ್ನು ಬೆಂಬಲಿಸುವುದರ ಜತೆಗೆ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇದನ್ನು ಮನಗಂಡು ಶಾಸಕ ಡಿ.ರವಿಶಂಕರ್ ಸಮಾಜದ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕು. ಇದರ ಜತೆಗೆ ಕೇಶಾಲಂಕಾರಿಗಳ ಸಂಘಕ್ಕೆ ಪಟ್ಟಣದಲ್ಲಿ ಸಿಎ ನಿವೇಶನ ಕೊಡಿಸಿಕೊಡಬೇಕು ಎಂದು ಇದೇ ಸಂಧರ್ಭದಲ್ಲಿ ಮನವಿ ಸಲ್ಲಿಸಿದರು.

ಕೇಶಾಲಂಕಾರಿ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಕುಮಾರ್, ಪದಾಧಿಕಾರಿಗಳಾದ ಯೋಗೀಶ್, ಕುಮಾರ್, ವ್ಯಾನ್‌ಸುರೇಶ್, ಕುಚೇಲ, ಅರ್ಜುನ್, ಸಿದ್ದರಾಜು, ಸುಧಾಕರ್, ಮಣಿಕಂಠ, ಬೇಲೂರಯ್ಯ, ಸತೀಶ್, ವೆಂಕಟೇಶ್, ರಾಜೇಶ್, ಮಂಜುನಾಥ್, ರವಿಕುಮಾರ್, ಹರೀಶ್, ಸ್ವಾಮಿ ಇತರರಿದ್ದರು.