ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಅಂಬೇಡ್ಕರ್ ಬಡಾವಣೆಯ ವೈ.ಎನ್.ಪ್ರಕಾಶ್ ಎಂಬುವರು ಶಾಸಕರಿಗೆ ವಿವಿಧ ಸವಲತ್ತು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಶಾಸಕರು ನಾನು ನಿನಗೆ ಸಹಾಯ ಮಾಡುವುದಿಲ್ಲ ಎಂದು ನಿರಾಕರಿಸಿದ್ದರು. ಹಾಗಾಗಿ ಆ ಅರ್ಜಿಯನ್ನು ನನಗೆ ವಾಪಸ್ ಕೊಡಿಸಿಕೊಡುವಂತೆ ಕೋರಿರುವ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕರಿಗೆ ತಾಲೂಕು ಪಂಚಾಯಿತಿಯಲ್ಲಿ ಕೆಲಸ ಕೊಡಿಸಿಕೊಡಿ. ನನಗೆ ಆ್ಯಂಡ್ರಾಯ್ಡಾ ಮೊಬೈಲ್ ಕೊಡಿಸಿಕೊಡಿ, ಇಲ್ಲವೇ ಪಪಂನಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದು ಅದನ್ನು ಕೊಡಿಸಿಕೊಡಬೇಕು. ವಾಹನ ಚಾಲನೆ ತರಬೇತಿಗೆ ಧನಸಹಾಯ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ ಶಾಸಕರು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಶಾಸಕರಿಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಕೊಡಿಸಿಕೊಡಿ ಎಂದು ಪಟ್ಟಣದ ಆರಕ್ಷಕ ವೃತ್ತ ನಿರೀಕ್ಷಕರ ವಿಳಾಸದಲ್ಲಿರುವ ಅರ್ಜಿ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.