ಚಾಮರಾಜನಗರ: ಚಾ.ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸುವ ಕುರಿತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಇತ್ತೀಚೆಗೆ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳ ಜತೆ ಭೇಟಿನೀಡಿ ಪರಿಶೀಲಿಸಿದರು.
ತಾಲೂಕಿನ ದೊಡ್ಡಮೋಳೆ, ಎಡಕಟ್ಟೆ, ಉತ್ತುವಳ್ಳಿ, ಯಡಪುರ, ಮಲ್ಲಯ್ಯನಪುರ, ಜ್ಯೋತಿಗೌಡನಪುರ ಹಾಗೂ ಇನ್ನಿತರೆ ಗ್ರಾಮಗಳಿಗೆ ತೆರಳಿ ಸೇತುವೆಗಳ ತಡೆಗೋಡೆ, ರೈತರ ಜಮೀನುಗಳಿಗೆ ಹೋಗುವ ಅಡ್ಡಹಳ್ಳಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಡೆಗೋಡೆ, ಅಡ್ಡಹಳ್ಳಗಳಲ್ಲಿ ನೀರುನಿಲ್ಲುವ ಸ್ಥಳಗಳಲ್ಲಿ ಸೇತುವೆ ನಿರ್ಮಿಸುವ ಸಂಬಂಧ ಸಾರ್ವಜನಿಕರ ಒತ್ತಾಯದ ಮೇರೆಗೆ ಪರಿಶೀಲನೆ ನಡೆಸಲಾಗಿದೆ ಎಂದರು.
ಈ ವೇಳೆ ಗಾ.್ರಪಂ ಸದಸ್ಯ ಮಹದೇವಸ್ವಾಮಿ, ಸಣ್ಣ ನೀರಾವರಿ ಇಲಾಖೆ ಎಇಇ ಅಭಿಷೇಕ್, ಇಇ ಮಂಜುಳಾ ಹಾಜರಿದ್ದರು.