ಜಿಲ್ಲೆ

ಶಾಸಕರಿಂದ ಜು.25ಂದು ರೋಡ್‌ಡಿವೈಡರ್ ವೀಕ್ಷಣೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ನಗರದ ವಿವಿಧೆಡೆ ನಿರ್ಮಾಣಗೊಂಡಿರುವ ರೋಡ್ ಡಿವೈಡರ್ ಹಾಗೂ ಇತರೆ ಕಾಮಗಾರಿಗಳನ್ನು ಶಾಸಕ ಕೆ.ಸಿ.ವೀರೇಂ ದ್ರ ಪಪ್ಪಿ ಅವರು ಅಧಿಕಾರಿಗಳೊಂದಿಗೆ ಜು.25ಂದು ವೀಕ್ಷಿಸಲಿದ್ದು,ಈ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಅಂದು ಮಧ್ಯಾಹ್ನ 1ಗಂಟೆಗೆ ಹೊಳಲ್ಕೆರೆ ರಸ್ತೆ ಕನಕದಾಸ ವೃತ್ತದಿಂದ ಕಾಮಗಾರಿಗಳ ವೀಕ್ಷಣೆ ಪ್ರಾರಂಭವಾಗಲಿದೆ.

ಗೌರಸಮುದ್ರ ಮಾರಮ್ಮ ದೇವಸ್ಥಾನ,ಮುಖ್ಯಅಂಚೆಕಚೇರಿ,ಗಾಂಧಿಸರ್ಕಲ್,ಎಸ್‌ಬಿಐ ಬ್ಯಾಂಕ್ ಸರ್ಕಲ್,ಪ್ರವಾಸಿ ಮಂದಿರ,ವಿ.ಪಿ.ಬ ಡಾವಣೆ ರಸ್ತೆ ಮತ್ತು ಜೆಸಿಆರ್‌ರಸ್ತೆ,ಆರ್‌ಟಿಒ ಕಚೇರಿ ರಸ್ತೆ,ತುರುವನೂರು ರಸ್ತೆ,ಮದಕರಿ ನಾಯಕ ವೃತ್ತ,ಸಾರ್ವಜನಿಕ ಆಸ್ಪತ್ರೆ ಬಳಿ ಹಾಗೂ ಚಳ್ಳಕೆರೆ ಗೇಟ್ ವರೆಗೆ ನಿರ್ಮಾಣವಾಗಿರುವ ರೋಡ್ ಡಿವೈಡರ್,ಇತರೆ ಕಾಮಗಾರಿಗಳನ್ನು ಶಾಸಕರು ವೀಕ್ಷಿಸಲಿದ್ದಾರೆ.

ಜಿಲ್ಲಾಧಿಕಾರಿ ಜಿ ಆರ್‌ಜಿ ದಿವ್ಯಾಪ್ರಭು,ಎಸ್‌ಪಿ ಕೆ.ಪರಶುರಾಮ ಮತ್ತಿತರ ಅಧಿಕಾರಿಗಳಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.