ಜಿಲ್ಲೆ

ಶಾಸಕರ ಹೆಸರು ಕೆಡಿಸಲು ಪ್ರಯತ್ನ

ಬೀದರ್: ಶಾಸಕ ರಹೀಮ್ ಖಾನ್ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ತಿಳಿಸಿದ್ದಾರೆ.

ಮೂರು ಬಾರಿ ಶಾಸಕರಾಗಿರುವ ಖಾನ್, ಸರ್ವ ಸಮುದಾಯಗಳ ಹಿತ ಕಾಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸರ್ಕಾರದ ವಿವಿಧ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸಿದ್ದಾರೆ. ಆದರೂ ಅವರ ಹೆಸರು ಕೆಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

2016ರಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದಾಗ ಶಾಸಕರು ವೈಯಕ್ತಿಕ ಖರ್ಚಿನಲ್ಲಿ ಕ್ಷೇತ್ರದ ಜನರಿಗೆ ನೀರು ಪೂರೈಸಿದ್ದರು. ನೀರು ಸರಬರಾಜಿನ ಹೆಸರಿನಲ್ಲಿ ಶಾಸಕರು ನಗರಸಭೆಯಿಂದ 7 ಕೋಟಿ ರೂ.ಬಿಲ್ ಎತ್ತಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಂಥವುಗಳಿಗೆ ಯಾರೂ ಕಿವಿಗೊಡಬಾರದು ಎಂದರು.

ಪ್ರಮುಖರಾದ ವಿನೋದ ಅಪ್ಪೆ, ಬಾಬು ಪಾಸ್ವಾನ್, ತುಕಾರಾಮ ಕರಾಟೆ, ಅಬ್ದುಲ್ ಖದೀರ್, ಪ್ರದೀಪ ಜಂಜೀರೆ, ನಗರಸಭೆ ಸದಸ್ಯ ಮಹ್ಮದ್ ಗೌಸ್ ಇದ್ದರು.