ಚಿತ್ರದುರ್ಗ: ಮುಸ್ಲಿಂ ಮತ್ತು ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಸವಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೇಕಾಯಿ ಶ್ರೀನಿವಾಸ್ ವಿಧಾನಸಭಾ ಸ್ಪೀಕರ್‌ಗೆ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಸಮುದಾಯ ಟೀಕಿಸಿ ಹೇಳಿಕೆ ನೀಡುವವರ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಸುಬಾನ್‌ವುಲ್ಲಾ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಅವರು ಮುಸಲ್ಮಾನರನ್ನು ದೇಶ ಬಿಟ್ಟು ಓಡಿಸುತ್ತೇವೆ ಎಂಬ ಹೇಳಿಕೆ ನೀಡಿ, ದ್ವೇಷ ಭಾವನೆ ಮೂಡಿಸಲು ಮುಂದಾಗುತ್ತಿದ್ದಾರೆ. ಕೋಮು ಸೌಹಾರ್ದ ಕೆಡಿಸಲು ಯತ್ನಿಸುವವರಿಗೆ ಯಾವ ಕಾರ್ಯಕ್ರಮದಲ್ಲೂ ಮಾತನಾಡಲು ಅವಕಾಶ ನೀಡಬಾರದು. ಇಡೀ ದೇಶದಲ್ಲೇ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದರು.
ಕಮ್ರಾನ್ ಆಲಿ, ಸಕೀತ್ ಇತರರಿದ್ದರು.