ಜಿಲ್ಲೆ

ಶಾಸಕ ಶಿವಲಿಂಗೇಗೌಡರಿಂದ ರಾಯಣ್ಣ ಕಾರ್ಯಕ್ರಮ ದುರ್ಬಳಕೆ : ಜೆಡಿಎಸ್ ಮುಂಖಡರ ಆರೋಪ

reportermys

ಹಾಸನ: ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮವನ್ನು ಕ್ಷೇತ್ರ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಕುರುಬ ಸಮುದಾಯದ ಮುಖಂಡ ಬಾಣಾವರ ಅಶೋಕ್ ಆರೋಪಿಸಿದರು.

ಒಂದು ಸಮಾಜದ ಮತ್ತು ಸ್ವಾತಂತ್ರ್ಯ ಹೋರಾಟಗಾರನ ಕಂಚಿನ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಗಾಳಕ್ಕಾಗಿ ಬಳಸಿಕೊಳ್ಳಲಾಗಿದೆ. ನಮ್ಮ ಸಮಾಜದ ಕೆಲ ಮುಖಂಡರಗಳನ್ನು ಹೊರಗಿಟ್ಟಿ ಹಾಗೂ ಸ್ವಾಮೀಜಿಯವರನ್ನು ಕೂಡ ಆಹ್ವಾನಿಸದೆ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವಲಿಂಗೇಗೌಡರ ವಿರುದ್ಧ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಶಿವಲಿಂಗೇಗೌಡರು ಅರಸೀಕೆರೆಯಲ್ಲಿಮೂರು ಬಾರಿ ಶಾಸಕರಾಗಿದ್ದು ಜೆಡಿಎಸ್ ಪಕ್ಷದಿಂದ ಆದರೆ ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವ ಅವರು ಇಲ್ಲಸಲ್ಲದ ಆರೋಪಗಳನ್ನ ಮಾಡುವುದು ಸರಿಯಲ್ಲ,ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಕುರುಬ ಸಮುದಾಯವನ್ನು ಬಳಸಿಕೊಳ್ಳಲಾಗಿದೆ ಅವರಿಗೆ ನಿಜವಾಗಿಯೂ ಕೂಡ ನೈತಿಕತೆ ಇದ್ದರೆ ನಮ್ಮ ಸಮಾಜದ ಹೆಸರಿಡದೆ ಅವರು ಬಹಿರಂಗವಾಗಿ ಸಮಾವೇಶ ಮಾಡಿ ಇಷ್ಟು ಜನರನ್ನ ಸೇರಿಸಲಿ ಎಂದು ಸವಾಲು ಹಾಕಿದ್ದರು.

ಕೆಎಂಶಿ ರಾಜಕೀಯವಾಗಿ ಸಾಕಷ್ಟು ಅನುಕೂಲಗಳನ್ನ ಜೆಡಿಎಸ್ ಪಕ್ಷದಿಂದ ಪಡೆದುಕೊಂಡಿದ್ದಾರೆ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ,ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಲು ಜೆಡಿಎಸ್ ನಾಯಕರ ಶ್ರಮ ಸಾಕಷ್ಟಿದೆ.ಆದರೆ ಈಗ ಅವರ ವಿರುದ್ಧವೇ ವಾಗ್ದಾಳಿ ನಡೆಸಿ ನನ್ನನ್ನ ಪಕ್ಷದಿಂದ ಹೊರದಬ್ಬಿದ್ದಾರೆ ಎಂಬ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಖಂಡನೀಯ,ಕುತಂತ್ರ ರಾಜಕಾರಣದಿಂದ ತಮ್ಮ ಮುಂದಿನ ರಾಜಕೀಯ ಜೀವನದ ಅನುಕೂಲಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ ಈಗ ಜೆಡಿಎಸ್ ಪಕ್ಷದ ನಾಯಕರನ್ನ ತೆಗಲುತ್ತಿರುವ ಇವರು ಇನ್ನ ಆರು ತಿಂಗಳಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನ ಬೈದಾಡಿಕೊಂಡು ಮತ್ತೆ ಬೀದಿ ಜಗಳ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ,ಕೆ.ಎಂ.ಶಿವಲಿಂಗೇಗೌಡರು ಅಹಿಂದ ಮತವನ್ನ ಸೆಳೆಯುವ ದೃಷ್ಟಿಯಿಂದ ಕುರುಬ ಸಮಾಜವನ್ನು ಮುಂದಿಟ್ಟುಕೊಂಡು ಈ ರೀತಿ ಕಾರ್ಯಕ್ರಮ ಮಾಡಿದ್ದಾರೆ.ಕೀಳು ಮಟ್ಟದ ರಾಜಕೀಯ ಮಾಡಲು ಮೂಲಕ ಜಾತಿ ಜಾತಿಗಳನ್ನು ಎತ್ತು ಕಟ್ಟಿ,ಸಮಾಜದಲ್ಲಿ ಅಶಾಂತಿ ಮೂಡಿಸಲು ಹೊರಟಿದ್ದಾರೆ ಎಂದು ದೂರಿದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಇದೊಂದು ರಾಜಕೀಯ ಕಾರ್ಯಕ್ರಮವಾಗಿದ್ದರಿಂದ ನಮ್ಮ ಸಮಾಜದ ನಾಲ್ಕು ಮಠಾಧೀಶರು ಗೈರು ಹಾಜರಾಗಿದ್ದಾರೆ,ಅಲ್ಲದೆ ಹಲವು ಸಮಾಜದ ಮುಖಂಡರನ್ನು ಹೊರಗಿಟ್ಟು ಈ ಕಾರ್ಯಕ್ರಮ ಮಾಡುವುದರ ಹಿಂದಿನ ಉದೇಶವಾದ್ದರು ಏನ್ನು ಕಾರ್ಯಕ್ರಮಕ್ಕೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಕೂಡ ಅನುದಾನ ನೀಡಿದ್ದಾರೆ ಅವರನ್ನು ಕೂಡ ಆಹ್ವಾನಿಸಿಲ್ಲ ಇದೊಂದು ರಾಜಕೀಯ ದುರುದ್ದೇಶದ ಕಾರ್ಯಕ್ರಮ ಎಂದು ಕಿರಿಕರಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ ಪಕ್ಷದ ಮುಖಂಡರಾದ ಗಂಗಾಧರ್,ಪುರಸಭೆ ಮಾಜಿ ಸದಸ್ಯ ದೇವರಾಜ್,ನಗರಸಭೆ ಸದಸ್ಯ ಜಾವಿದ್ ಹುಸೇನ್ ಸೇರಿದಂತೆ ಇನ್ನಿತರರು ಹಾಜರಿದ್ದರು.