ವಿಜಯಪುರ: ಕನ್ನಡ ಹೋರಾಟಗಾರರು ರೋಲ್ ಕಾಲ್ ಹೋರಾಟಗಾರರು ಎಂದಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಯತ್ನಾಳರ ಸರ್ಕಾರಿ ಕಚೇರಿ ಎದುರು ಕರವೇ ಕಾರ್ಯಕರ್ತರು ಶಾಸಕ ಯತ್ನಾಳ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ನಕಲಿ ಕನ್ನಡಪರ ಸಂಘಟನೆಗಳ ಎಂದು ಹೇಳಿಕೆ ನೀಡಿದ ಯತ್ನಾಳಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ, ಕನ್ನಡ ಪರ ಸಂಘಟನೆಗಳ ವಿರುದ್ದ
ಅವಹೇಳನಾಕಾರಿ ಹೇಳಿಕೆ ಹಿಂಪಡೆದು ಹೋರಾಟಗಾರರಿಗೆ ಕ್ಷಮೆ ಕೇಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ಪ್ರಕಾಶ ಕುಂಬಾರ ಮತ್ತಿತರರಿದ್ದರು.