ಜಿಲ್ಲೆ

ಶಾಸಕ ಬಿ. ನಾಗೇಂದ್ರ ಮನೆ ಮೇಲೆ ಇಡಿ ದಾಳಿ

ಬಳ್ಳಾರಿ : ನಗರದ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ನಿವಾಸದ ಮೇಲೆ ಬುಧವಾರ ಬೆಳಗಿನ ಜಾವ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿ, ಅಗತ್ಯ ದಾಖಲೆಗಳು ಪರಿಶೀಲಿಸಿದ್ದಾರೆ. ಈ ವೇಳೆ, ವಿಜಯಕುಮಾರ ಮತ್ತು ಚೇತನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರೂ ನಾಗೇಂದ್ರ ಅವರ ಅಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಿಆರ್‌ಪಿಎಫ್ ಭದ್ರತೆಯೊಂದಿಗೆ ನಗರಕ್ಕೆ ಆಗಮಿಸಿದ ಇಡಿ ಅಧಿಕಾರಿಗಳು ಮೂರು ತಂಡಗಳಾಗಿ ಶೋಧ ನಡೆಸಿ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ನಾಗೇಂದ್ರ ಅವರ ಅಪ್ತರ ಮನೆಗಳನ್ನು ನೋಡದೆ ಹಿನ್ನಲೆ ಕೆಲಸಗಾರರನ್ನು ಕರೆದುಕೊಂಡು ಹೋಗಿ ದಾಳಿ ನಡೆಸಿದ್ದಾರೆ. ಸಂಜೆ ನಾಗೇಂದ್ರ ನಿವಾಸದಲ್ಲಿ ಎರಡು ತಂಡಗಳಾಗಿ ಶೋಧ ಇಡಿ ಅಧಿಕಾರಿಗಳು ಕಚೇರಿಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಮನೆಯ ಹಿಂಬಾಗಿಲಿನಿಂದ ಒಂದು ಹೊರಟಿತು. ಮನೆಯಲ್ಲಿದ್ದ ಎರಡನೇ ತಂಡ ನಿರಂತರವಾಗಿ ಶೋಧ ನಡೆಸುತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸಚಿವರ ಅದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಆರೋಪದ ಮೇಲೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಸದ್ಯ ಬೆಂಗಳೂರಿನಲ್ಲಿರುವ ನಾಗೇಂದ್ರ ಅವರನ್ನು ಬಹುಕೋಟಿ ಹಗರಣದ ಆರೋಪದ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದರು.
ಕೆಲ ವರ್ಷಗಳ ಹಿಂದೆ ಅಕ್ರಮ ಅದಿರು ಸಾಗಣಿಕೆ ಆರೋಪದಲ್ಲಿ ಸಿಬಿಐ ಹಾಗೂ ಇಡಿ ಅಧಿಕಾರಿಗಳು ದಾಳಿ ಎದುರಿಸಿ ಜೈಲಿಗೆ ಕೂಡ ಹೋಗಿದ್ದರು