ಜಿಲ್ಲೆ

ಶಾಲ್ಮಲಾ ನದಿ ನೀರು ಸಂಗ್ರಹ

Dharwad

ಧಾರವಾಡ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ಭೂಮಿಪೂಜೆ ಅಂಗವಾಗಿ ನಗರದ ಶಾಲ್ಮಲಾ ನದಿಯ ಜಲವನ್ನು ಅಯೋಧ್ಯೆಗೆ ಕಳುಹಿಸುವ ನಿಟ್ಟಿನಲ್ಲಿ ನಗರದ ಶಾಲ್ಮಲಾ ಉಗಮ ಸ್ಥಾನದಲ್ಲಿ ಭಾನುವಾರ ಗಂಗಾಪೂಜೆ ನಡೆಸಿ ಪವಿತ್ರ ಗಂಗಾಜಲವನ್ನು ಶೇಖರಣೆ ಮಾಡಲಾಯಿತು. ನಗರದ ವೀರ ಸಾವರಕರ ಗೆಳೆಯರ ಬಳಗದ ವತಿಯಿಂದ ಈ ಕಾರ್ಯಕ್ರಮ ನಡೆಸಿದ್ದು, ನಗರದ ಎಲ್ಲ ರಾಮ ಭಕ್ತರ ಆಶಯದಂತೆ ಈ ಕಾರ್ಯ ನಡೆಸಲಾಗುತ್ತಿದೆ. ಆರ್​ಎಸ್​ಎಸ್ ಮುಖಂಡ ಶ್ರೀಧರ ನಾಡಗೀರ ಅವರು ಗಂಗಾಪೂಜೆ ನೆರವೇರಿಸಿ ಗಂಗಾ ಶೇಖರಣೆ ಮಾಡಿದರು. ಕರ ಸೇವಕರಾದ ಉದ್ಧವ ಗದಗಕರ್, ರವಿ ಯಲಿಗಾರ, ಭಾಸೂರಾನಂದ ಕುಲಕರ್ಣಿ, ಶರಣು ಅಂಗಡಿ, ವಿಷ್ಣು ಹುಕ್ಕೇರಿ, ಸುದರ್ಶನ, ವೀರ ಸಾವರಕರ ಗೆಳೆಯರ ಬಳಗದ ಪದಾಧಿಕಾರಿಗಳು, ಇತರರು ಇದ್ದರು.