ಜಿಲ್ಲೆ

ಶಾಲೆಗಳಿಗೆ ಸೌಕರ್ಯ ಕಲ್ಪಿಸಲು 35 ಕೋಟಿ ರೂ.ಮೀಸಲು

ಅಫಜಲಪುರ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು 35 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.

ನ್ಯಾಷನಲ್ ಫಂಕ್ಷನ್‌ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಅವಶ್ಯಕವಾಗಿರುವ ಗುರುಭವನದ ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು.

ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಡಾ.ಚನ್ನಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡಿದರು. ಡಾ.ಡಿ.ಎನ್ ಪಾಟೀಲ್​ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸಂಜೀವಕುಮಾರ ದಾಸರ, ಬಿಇಒ ಮಾರುತಿ ಹುಜರತಿ, ತಾಪಂ ಇಒ ರಮೇಶ ಸುಲ್ಪಿ, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಲ್ಲೂರ, ಪ್ರಮುಖರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಎಚ್.ಎಸ್.ಪಾಟೀಲ್, ರಾಜಕುಮಾರ ಗುಣಾರಿ, ಸಿದ್ದು ಚಿಂಚೊಳಿ, ಗಾಂಧಿ ದಫೇದಾರ್, ಶೋಭರಾಜ ಮ್ಯಾಳೇಸಿ, ಹೈದರ್‌ಸಾಬ್ ಚೌಧರಿ, ಪ್ರಕಾಶ ಚಾಂದಕವಟೆ, ರಮೇಶ ಸೊನ್ನ, ಆರ್.ಬಿ.ಬಿರಾದಾರ, ದೇವಿಂದ್ರಪ್ಪ ಸಜ್ಜನ್, ವ್ಹಿ.ವೈ.ಗುಡುಮಿ, ಸಂಗಮನಾಥ ಮ್ಯಾಳೇಸಿ, ಜಾವೀದ್ ಜುಮನಾಳ ಇತರರಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 32 ಶಿಕ್ಷಕರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.