ಹುಬ್ಬಳ್ಳಿ: 2020-21ನೇ ಸಾಲಿನ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಕರೊನಾ ಹಿನ್ನೆಲೆಯಲ್ಲಿ ಕೂಡಲೇ ಈ ಆದೇಶವನ್ನು ರದ್ದು ಪಡಿಸುವಂತೆ ಧಾರವಾಡ ಜಿಲ್ಲಾ ಅನುದಾನರಹಿತ ಶಾಲೆಗಳ ಮ್ಯಾನೇಜ್ವೆುಂಟ್ ಅಸೋಸಿಯೇಷನ್ ಹುಬ್ಬಳ್ಳಿ ಘಟಕ, ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದೆ.
ಕೋವಿಡ್- 19 ಸಂದರ್ಭದಲ್ಲಿ ಮೇ 31ರೊಳಗೆ ಶಾಲೆಗಳ ಮಾನ್ಯತೆ ನವೀಕರಣ ಅಸಾಧ್ಯ. ಶುಲ್ಕ ಭರಿಸಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳಬೇಕು. ಮಾಡದೇ ಇದ್ದರೆ ಇದಕ್ಕೆ ಮುಖ್ಯಗುರುಗಳು ಕಾರಣವೆಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೆ, ಇಂಥ ಸಂದರ್ಭದಲ್ಲಿ ಶಿಕ್ಷಕರು ಮನೆಯಿಂದ ಹೊರ ಬರಲು ಅಸಾಧ್ಯ. ಅಲ್ಲದೆ, ಲಾಕ್ಡೌನ್ ಇದೆ. ಹಾಗಾಗಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಮನವಿ ಮಾಡಿದರು.ಉಪಾಧ್ಯಕ್ಷ ಲಿಂಗರಾಜ ಪಾಟೀಲ, ಕಾರ್ಯದರ್ಶಿ ಮುರಳೀಧರ ಬಾಬಾಜಿ, ರಾಜಾ ದೇಸಾಯಿ, ಮಹೇಂದ್ರ ಸಿಂಘಿ, ಇತರರು ಇದ್ದರು.