ಕಾರವಾರ: ಉತ್ತರ ಕನ್ನಡ ಜಿಪಂ ಸಿಇಒ ಪ್ರಿಯಾಂಗಾ ಎಂ. ಅವರು ಶುಕ್ರವಾರ ಮುಂಡಗೋಡ ವಸತಿ ಶಾಲೆಯೊಂದಕ್ಕೆ ತೆರಳಿ ಬಿಸಿಯೂಟ ಸವಿದರು.
ಮುಂಡಗೋಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆಗೆ ತೆರಳಿ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳ ಜತೆ ನೆಲದ ಮೇಲೆ ಕುಳಿತು, ಅನ್ನ, ಸಾರು ಮೊಟ್ಟೆ ಸವಿದರು. ಅದಕ್ಕೂ ಪೂರ್ವದಲ್ಲಿ ಅವರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿದರು.