ನೂಲಿಗ್ಗೇರಿ ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಯಿತು. ರಾಜೇಶ್, ರಮ್ಯಾ ದಿನೇಶ, ಎಂ.ವಿಶ್ವನಾಥ್, ವೆಂಕಟೇಶ ಭಟ್, ಪ್ರಮೀಳಾ ಇತರರಿದ್ದರು. 
ಜಿಲ್ಲೆ

ಶಾಲಾಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ

ಹೊಸನಗರ: ಸರ್ಕಾರಿ ಶಾಲೆಗೆ ಮಕ್ಕಳು ಬರುವುದು ಕಡಿಮೆ. ಆದರೆ ನೂಲಿಗ್ಗೇರಿ ಶಾಲೆಯಲ್ಲಿ 100 ಮಕ್ಕಳಿದ್ದು ಉತ್ತಮ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಹಿರೀಮನೆ ಹೇಳಿದರು.

ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ನೂತನ ಅಧ್ಯಕ್ಷರಾಗಿ ಅಕಾರವಹಿಸಿಕೊಂಡು ಮಾತನಾಡಿದ ಅವರು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ ಎಂದರು.

ಮಾಜಿ ಅಧ್ಯಕ್ಷ ದೇವಪ್ಪ ಮಾತನಾಡಿ, ಸದರಿ ಶಾಲೆಯಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿ ಕೂಡ ಆರಂಭವಾಗಿದೆ. ಅಲ್ಲದೆ 60ರ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಶಿಕ್ಷಕ ವೃಂದ, ಹಳೇ ವಿದ್ಯಾರ್ಥಿಗಳು, ಗೆಳೆಯರ ಬಳಗ, ಪಾಲಕರ ಸಹಕಾರವೇ ಇದಕ್ಕೆ ಕಾರಣ ಎಂದರು.

ನಿರ್ಗಮಿತ ಅಧ್ಯಕ್ಷ ದೇವಪ್ಪ, ಉಪಾಧ್ಯಕ್ಷೆ ಅನ್ನಪೂರ್ಣಾ ಮತ್ತು ಕಳೆದ ಅವಯ ಸದಸ್ಯರನ್ನು ಗೌರವಿಸಲಾಯಿತು. ಮಕ್ಕಳಿಗೆ ಸ್ವೆಟರ್ ವಿತರಿಸಲಾಯಿತು.

ಎಸ್‌ಡಿಎಂಸಿ ನೂತನ ಉಪಾಧ್ಯಕ್ಷೆ ರಮ್ಯಾ ದಿನೇಶ, ಗ್ರಾಪಂ ಸದಸ್ಯ ಎಂ.ವಿಶ್ವನಾಥ್, ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ವೆಂಕಟೇಶ ಭಟ್, ಮುಖ್ಯ ಶಿಕ್ಷಕಿ ಪ್ರಮೀಳಾ, ಶಿಕ್ಷಕರಾದ ಎಚ್.ಎಸ್.ಆಶಿಕ್, ರೀದಾ, ಜ್ಯೋತಿ, ಮೀನಾಕ್ಷಿ, ಪ್ರಮುಖರಾದ ಸಂತೋಷ, ದತ್ತಾತ್ರೇಯ ರಾವ್, ಗಣೇಶ ರಾವ್, ರಾಘವೇಂದ್ರ, ಬಾಲಕೃಷ್ಣ, ಚಿದಂಬರ್, ಸವಿತಾ, ಕವಿತಾ, ಕಲ್ಪನಾ, ರಂಜಿತಾ, ಶ್ವೇತಾ, ರೇಷ್ಮಾ ಬಾನು, ಜಲಜಾ, ಅಡುಗೆ ಸಹಾಯಕಿಯರಾದ ಮೂಕಾಂಬಿಕಾ, ಸುಮಿತ್ರಾ ಪಾಲ್ಗೊಂಡಿದ್ದರು.