ಚಿಕ್ಕಮಗಳೂರು: ನಗರದ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಗೆ ಬೆಂಗಳೂರಿನ ಬ್ರಿಗೇಡ್ ಫೌಂಡೇಶನ್ ಕೊಡಮಾಡಿರುವ ಶಾಲಾವಾಹನವನ್ನು ಅಧ್ಯಕ್ಷ ಎಂ.ಆರ್.ಜಯಶAಕರ್ ಶಾಲೆಗೆ ಹಸ್ತಾಂತರಿಸಿದರು.
೧೦೪ವರ್ಷಗಳ ಇತಿಹಾಸವನ್ನು ಹೊಂದಿರುವ ನಗರ ಹೃದಯಭಾಗದ ವಿಶ್ವವಿದ್ಯಾಲಯ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧರಾಗಿರುವ ಜಯಶಂಕರ್ ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಸ್ವಾತಂತ್ರö್ಯ ಹೋರಾಟದ ಸಮಯದಲ್ಲಿ ಆರಂಭಗೊAಡ ಶಾಲೆ ಸೌಲಭ್ಯಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ದಶಕಗಳಲ್ಲಿ ಸೊರಗಿತ್ತು. ಐತಿಹಾಸಿಕ ಶಾಲೆಯನ್ನು ಉಚ್ಛಾö್ರಯ ಸ್ಥಿತಿಗೆ ಕೊಂಡೊಯ್ಯುವ ಸಂಕಲ್ಪದೊAದಿಗೆ ಕಾಲಬದ್ಧ ಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇದೇ ವೇಳೆ ಜಯಶಂಕರ ಅವರು ಆರ್ಥಿಕ ನೆರವನ್ನು ಘೋಷಿಸಿದರು.
ಶಾಲೆಯ ಆಡಳಿತಮಂಡಳಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಸುಮಾರು ೬೦ ಲಕ್ಷ ರೂ. ವೆಚ್ಚದಲ್ಲಿ ಶಾಲಾ ನವೀಕರಣ ಕೈಗೊಳ್ಳಲಾಗಿದೆ. ಆಟೋಪಕರಣ-ಪಾಠೋಪಕರಣ-ಪೀಠೋಪಕರಣ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‌ಲ್ಯಾಬ್ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಬ್ರಿಗೇಡ್ ಫೌಂಡೇಶನ್ ಕಲ್ಪಿಸಲು ಯೋಜಿಸಿದೆ. ಹೆಚ್ಚುವರಿ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ವೇತನ ನೀಡುವುದರ ಜೊತೆಗೆ ಶಾಲೆಯ ಎಲ್ಲ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ಜಯಶಂಕರ್ ತಿಳಿಸಿದರು.
೨೫ ಲಕ್ಷ ರೂ. ಅಂದಾಜು ವೆಚ್ಚದ ಶಾಲಾವಾಹನವನ್ನು ವಿಶ್ವವಿದ್ಯಾಲಯದ ಅಧ್ಯಕ್ಷ ಹೇಮಂತಕುಮಾರ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣರಾವ್ ಮತ್ತು ಖಜಾಂಚಿ ಜಯಂತಿ ಶರ್ಮ ಅವರಿಗೆ ಜಯಶಂಕರ್ ಹಸ್ತಾಂತರಿಸಿದರು.
ಬ್ರಿಗೇಡ್ ಫೌಂಡೇಶನ ನಿರ್ದೇಶಕ ಎಂ.ಆರ್.ಗುರುಮೂರ್ತಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮೈತ್ರಿ, ವಿದ್ಯಾಸಂಸ್ಥೆಯ ಉಪಾಧಕ್ಷರಾದ ಚಂದ್ರಮೌಳಿ ಮತ್ತು ಶೇಷೇಗೌಡ, ಸದಸ್ಯರಾದ ಪ್ರೇಮಕುಮಾರ, ಸುನಿಲಕುಮಾರ್, ವಾಸುದೇವ, ಸುಬ್ಬೇಗೌಡ ಮತ್ತಿತರರಿದ್ದರು.