ಜಿಲ್ಲೆ

ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ರಕ್ಷತಾ ಗ್ರಾಮೀಣ ಮತ್ತು ಪರಿಸರ ಅಭಿವೃದ್ಧಿ ಸಂಘದ ವತಿಯಿಂದ ದಿ. ಪದ್ಮಾ ಚನ್ನಪ್ಪಗೌಡ ಪಾಟೀಲ ಜನ್ಮದಿನ ನಿಮಿತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪರಿಸರದಿಂದ ಆಗುವ ಲಾಭಗಳು ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಮುಗದ ಸ್ಪರ್ಧೆ ವಿಜೇತ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿ, ಪದ್ಮಾ ಚನ್ನಪ್ಪಗೌಡ ಪಾಟೀಲ ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಕಾಳಜಿ ಹೊಂದಿದ್ದರು. ಇಂದು ಅವರ ಸ್ಮರಣಾರ್ಥ ನೋಟ್‌ಬುಕ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ರಾಜು ಮುದ್ದಿ ಮಾತನಾಡಿ, ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ. ಬಡ ವಿದ್ಯಾರ್ಥಿಗಳ ನೆರವಿಗೆ ಎಲ್ಲರೂ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
ಎಲ್.ಸಿ. ಲಂಬಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯರಾದ ಬಸವರಾಜ ಮುದ್ದಿ, ಸಂತೋಷ ಲಂಬಿ, ಕರೆಪ್ಪ ತಳವಾರ, ಗುರು ಹಿರೇಮಠ, ಪಂಚಯ್ಯ ಕಂಬಾರಗಣವಿಮಠ, ಕೇಸರಿ, ಶಾಲಾ ಶಿಕ್ಷಕ ವೃಂದ, ರಕ್ಷತಾ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಇದ್ದರು.