ಜಿಲ್ಲೆ

ಶಾಲಾ ಮಕ್ಕಳ ಸಂಸತ್‌ಗೆ ಚುನಾವಣೆ

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಶಾಲಾ ಮಕ್ಕಳ ಸಂಸತ್ ಚುನಾವಣೆ ನಡೆಯಿತು.

6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ಮತದಾನದ ಮಹತ್ವವನ್ನು ಅರಿತರು. ಕೈ ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಮತ ಚಲಾಯಿಸಿ ಸಂತಸ ಪಟ್ಟರು.

ಚುನಾವಣೆ ಪ್ರಕ್ರಿಯೆ ನೇತೃತ್ವವನ್ನು ಶಿಕ್ಷಕರಾದ ಖಾನ್ ಖಾದರ್‌ವಲಿ, ಸೈಯದ್ ಖಾದರ್ ಭಾಷಾ, ಅಯ್ಯಪ್ಪನ್, ಎಲ್.ಆರ್. ಉಷಾ, ಮಂಜೂಷ, ಕೆ. ಶಾರದಾ, ವೈಶಾಲಿ ಬೆನ್ನಾಡಿ ಮತ್ತಿತರ ವಹಿಸಿದ್ದರು.

ಸಂಸ್ಥೆ ಶೈಕ್ಷಣಿಕ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ ಮತ ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್, ನಿರ್ದೇಶಕರಾದ ಪಿ.ಸಿ. ಸುನೀತಾ, ಐಸಿಎಸ್‌ಸಿ ಪ್ರಾಚಾರ್ಯ ಪಿ. ಬಸವರಾಜಯ್ಯ ಹಾಗೂ ಮುಖ್ಯ ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು.