ಜಿಲ್ಲೆ

ಶಾಲಾ ಮಕ್ಕಳ ಚರ್ಚ್​ ಭೇಟಿ ವಿಡಿಯೋ ಮಾಡಿ ವಿವಾದಕ್ಕೆ ಯತ್ನ

ತುಮಕೂರು: ಅಧ್ಯಯನ ಪ್ರವಾಸಕ್ಕಾಗಿ ಇಟ್ಟಿಗೆ ಕಾರ್ಖಾನೆಗೆ ತೆರಳಿದ್ದ ವಿದ್ಯಾರ್ಥಿಗಳು ಸಮೀಪದಲ್ಲಿಯೇ ಇದ್ದ ಚರ್ಚ್​ಗೆ ಭೇಟಿ ನೀಡಿದ್ದನ್ನು ವೀಡಿಯೋ ಚಿತ್ರಿಕರಣ ಮಾಡಿಕೊಂಡು ವಿವಾದವಾಗಿಸಲು ಪ್ರಯತ್ನಿಸಿರುವುದು ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಹುಳಿಯಾರು&ಕೆಂಕೆರೆ ಕೆಪಿಎಸ್​ ಶಾಲೆಯ 100ಕ್ಕೂ ಹೆಚ್ಚು ಮಕ್ಕಳನ್ನು ಕೈಗಾರಿಕೆಗೆ ಅಧ್ಯಯನ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ಹೋಲಿ ಟ್ರೆನಿಟಿ ಬಿಲೀವರ್ಸ್​ ಈಸ್ಟರ್ನ್​ ಚರ್ಚ್​ ಕರೆದೊಯ್ಯಲಾಗಿದ್ದು, ಈ ಸಂದರ್ಭದಲ್ಲಿ ಧರ್ಮಗುರು ಕೆಸ್ತ ಧರ್ಮದ ಬಗ್ಗೆ ಆಡಿರುವ ಮಾತುಗಳ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಮಕ್ಕಳನ್ನು ಕೈಗಾರಿಕೆ ಭೇಟಿಗೆ ಅನುಮತಿ ಪಡೆದು ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಚರ್ಚ್​ಗೂ ಭೇಟಿ ನೀಡಿರಬಹುದು. ಪ್ರವಾಸದ ಸಂದರ್ಭದಲ್ಲಿ ಎಲ್ಲ ಧರ್ಮದ ಕೇಂದ್ರಗಳಿಗೂ ಕರೆದೊಯ್ಯುವಂತೆ ಇಲ್ಲಿಯೂ ಕರೆದುಕೊಂಡು ಹೋಗಿರಬಹುದು ಇದನ್ನು ವಿವಾದವಾಗಿಸುತ್ತಿರುವುದು ವಿಷಾದನೀಯ ಎಂದು ಶಾಲೆಯ ಹಿರಿಯ ಶಿಕ್ಷಕರು ಅಭಿಪ್ರಾಯಪಟ್ಟರು.