ದೋರನಹಳ್ಳಿ: ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಕೋಣೆಗಳನ್ನು ಕಂಡು ದಂಗಾದ ಡಿಡಿಪಿಐ ಚನ್ನಬಸಪ್ಪ ಮುಧೋಳ ತಕ್ಷಣ ಅವುಗಳನ್ನು ಡೆಮಾಲಿಶ್ ಮಾಡಲಾಗುವುದು. ಅಲ್ಲದೆ ಪಿಡಬ್ಲುÈಡಿಗೆ ಶೀಘ್ರ ಪತ್ರ ಬರೆಯುವಂತೆ ಶಾಲೆಯ ಮುಖ್ಯಗುರುಗಳಿಗೆ ಸೂಚನೆ ನೀಡಿದರು.
ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಹಿರೇ ಅಗಸಿ ಶಾಲೆ, ಉರ್ದು ಶಾಲೆಗಳ ಕುರಿತು ವಿಜಯವಾಣಿ ಜು.೨೫ರಂದು `ಮುಖ್ಯಗುರು ತರಗತಿ ಕೋಣೆ ತಟ ತಟ' ಎಂಬ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚತ್ತ ಡಿಡಿಪಿಐ ಚನ್ನಬಸಪ್ಪ ಮುಧೋಳ ಹಾಗೂ ತಾಪಂ ಇಒ ಬಸವರಾಜ ಶರಬೈ ಅವರು ಸೋಮವಾರ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಸ್ಥಿತಿ ಕಂಡ ಕೆಲ ಹೊತ್ತು ದಂಗಾದರು.
ಮೊದಲು ಅಂಬೇಡ್ಕರ್ ನಗರದ ಶಾಲೆಗೆ ಭೇಟಿ ನೀಡಿದ ಅವರು ಎರಡು ವರ್ಷದ ಹಿಂದೆ ಮಳೆಗೆ ಬಿದ್ದ ಕಂಪೌAಡ, ಹಾಳಾದ ಶೌಚಗೃಹ, ಕೊಠಡಿಯೊಂದರಲ್ಲಿ ಮುರಿದ ಡೆಸ್ಕ ಗುಡ್ಡೆ, ಸಂಪೂರ್ಣ ಶಿಥೀಲಾವಸ್ಥೆಯಲ್ಲಿರುವ ತರಗತಿ ಕೋಣೆ, ಸೋರುವ ಮುಖ್ಯಗುರು ಕೋಣೆ ಕಂಡು ದಂಗಾದರು. ಅಲ್ಲದೆ ಸಮಸ್ಯೆಗಳ ಕುರಿತು ಗಮನಕ್ಕೆ ತರದ ಮುಖ್ಯಗುರುಗಳಿಗೆ ಖಾರವಾಗಿ ಪ್ರಶ್ನಿಸಿದರು. ಅಲ್ಲಿನ ಮೂರು ಕೋಣೆಗಳ ಡೆಮಾಲಿಶ್ ಮಾಡುವಂತೆ, ಮೂರು ಕೋಣೆಗಳಿಗೆ ದುರಸ್ತಿ ಮಾಡುವಂತೆ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಆರಕ್ಕೂ ಹೆಚ್ಚು ಕೋಣೆಗಳ ಡೆಮಾಲಿಶ್‌ಗೆ ಸೂಚಿಸಿದರು. ಅಲ್ಲದೆ ಮಳೆ ನೀರು ಶಾಲಾ ಆವರಣಕ್ಕೆ ನುಗ್ಗುತ್ತಿದ್ದು ಮಾದರಿ ಶಾಲೆಯ ಮುಂಭಾಗದಿAದ ಅಂಬೇಡ್ಕರ್ ಶಾಲೆಯ ಮುಂಭಾಗದಿAದ ಹಿರೇಹಳ್ಳಕ್ಕೆ ಸಂಪರ್ಕಿಸುವAತೆ ಚರಂಡಿ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಇಒ ಬಸವರಾಜ ಶರಬೈ ಹೇಳಿದರು. ಅಲ್ಲದೆ ಪೊಲೀಸ್ ಗಸ್ತಿಗೆ ಸೂಚಿಸಲಾಗುತ್ತದೆ ಎಂದು ಹೇಳಿದರು. ಪ್ರೌಢಶಾಲೆಗೂ ಭೇಟಿ ನೀಡಿ ಮಕ್ಕಳಾ ಮಟ್ಟವನ್ನು ಪರಿಶೀಲಿಸಿ ಅಲ್ಲಿನ ಮಳೆ ನೀರು ಹೊರ ಕಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದೆ ಸಂಧರ್ಬ ಹಿರೇ ಅಗಸಿ, ಉರ್ದು ಶಾಲೆಗಳ ಸಂಪೂರ್ಣ ಮಾಹಿತಿ ಪಡೆದು ಅಲ್ಲಿನ ಸಮಸ್ಯೆಗಳ ಕುರಿತು ಪರಿಹರಿಸಲು ಬಿಆರ್‌ಸಿ ರೇಣುಕಾ ಪಾಟೀಲ್ ಅವರಿಗೆ ಸೂಚಿಸಿದರು.
ಈ ವೇಳೆ ತಾಪಂ ಇಒ ಬಸವರಾಜ ಶರಬೈ, ಬಿಆರ್‌ಸಿ ರೇಣುಕಾ ಪಾಟೀಲ್, ಇಸಿಓ ಸಿದ್ರಾಮಪ್ಪ ಶೇಖಸಿಂಧಿ, ಮುಖ್ಯಗುರುಗಳಾದ ಕಮಲಾಕ್ಷಿ, ಸಿದ್ದಪ್ಪ ಸಿಂಘೆ, ಶಾಂತಪ್ಪ ಕೆರಟಗಿ ಎಸ್‌ಡಿಎಂಸಿ ಅಧ್ಯಕ್ಷರುಗಳಾದ ಹಣಮಂತ, ಭೀಮರಡ್ಡಿ ಕಟ್ಟಿಮನಿ ಗ್ರಾಮಸ್ಥರಾದ ಮಾನಪ್ಪ ಹುಲಸೂರ, ಹಯ್ಯಾಳಪ್ಪ ಗುಂಟನೂರ, ಯಮನಪ್ಪ ಮುಕುಡಿ, ಶ್ರೀನಿವಾಸ ಕಶೇಟ್ಟಿ, ಶಿವು ಜಂಗಳಿ ಇತರರಿದ್ದರು.