ಜಿಲ್ಲೆ

ಶಾಲಾ ಕೊಠಡಿ, ಸ್ಮಾರ್ಟ್ ಕ್ಲಾಸ್ ಉತ್ತೇಜನಕ್ಕೆ ಒತ್ತು

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ರೌಂಡ್ ಟೇಬಲ್ ಇಂಡಿಯಾ, ಲೇಡಿಸ್ ಸರ್ಕಲ್ ಇಂಡಿಯಾ ಸಹಭಾಗಿತ್ವದಲ್ಲಿ ದೇಶಾದ್ಯಂತ ‘ಫ್ರೀಡಂ ಡ್ರೖೆವ್’ ನಡೆಸಲಾಗುತ್ತಿದೆ. 65 ದಿನಗಳ ಈ ಪ್ರಯಾಣ ಹುಬ್ಬಳ್ಳಿಗೆ ಬಂದು ತಲುಪಿದೆ. ಇಲ್ಲಿಂದ ಹೊಸಪೇಟೆ, ಬಳ್ಳಾರಿ, ದಾವಣಗೆರೆ ಸೇರಿ ಇತರೆಡೆ ಸಂಚರಿಸಲಿದೆ ಎಂದು ರೌಂಡ್ ಟೇಬಲ್ ಇಂಡಿಯಾದ ರಾಷ್ಟ್ರೀಯ ಸಂಚಾಲಕ ಮನೋಜ ಬನ್ಸಾಲಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21 ರಾಜ್ಯಗಳಲ್ಲಿ 20 ಸಾವಿರ ಕಿ.ಮೀ. ಪ್ರಯಾಣ ಬೆಳೆಸಲಾಗುವುದು. ಇದರೊಟ್ಟಿಗೆ ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ‘ಲಕ್ಸುರಿ ಡ್ರೖೆವ್’ ನಡೆಸಲಾಗುತ್ತಿದೆ. ಅವರಿಗೆ ತೆರೆದ ವಾಹನಗಳಲ್ಲಿ ಕರೆದುಕೊಂಡು ಹೋಗುವುದು, ಪ್ರತಿಷ್ಠಿತ ಸ್ಥಳಗಳನ್ನು ಪರಿಚಯಿಸುವುದು ಸೇರಿ ಇತರ ವಿಷಯಗಳನ್ನು ತಿಳಿಸಲಾಗುವುದು ಎಂದರು.

ತುಷಾರ ಕವಳೇಕರ, ಅಂಕೇಶ ಜೈನ್ ಮಾತನಾಡಿ, ಸರ್ಕಾರ ನೀಡುವ ಅನುದಾನದದೊಂದಿಗೆ ನಮ್ಮ ಆರ್​ಟಿಐ ತಂಡದೊಂದಿಗೆ ಶಾಲಾ ಕೊಠಡಿಗಳನ್ನು ನಿರ್ವಿುಸಲಾಗುವುದು. ಸ್ಮಾರ್ಟ್ ಕ್ಲಾಸ್​ಗಳ ಉತ್ತೇಜನಕ್ಕೂ ಕಾಯಕಲ್ಪ ರೂಪಿಸಲಾಗಿದೆ ಎಂದರು.

ಲೇಡಿಸ್ ಸರ್ಕಲ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೆ ಆಂಚಲ್ ಕೆ. ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕೊಠಡಿ, ಶೌಚಾಲಯ ನಿರ್ವಣ, ಮಧ್ಯಾಹ್ನದ ಬಿಸಿಯೂಟಕ್ಕೆ ಒತ್ತು ನೀಡಲಾಗುತ್ತಿದೆ. ಸರ್ವರಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶ ಸಂಘದ್ದಾಗಿದೆ ಎಂದರು.

ರೌಂಡ್ ಟೇಬಲ್ ಇಂಡಿಯಾ ಏರಿಯಾ 10ರ ಅಧ್ಯಕ್ಷ ಹಿಮಾಂಶು ಕೊಠಾರಿ, ಲೇಡಿಸ್ ಸರ್ಕಲ್ ಇಂಡಿಯಾ ಏರಿಯಾ 10 ಅಧ್ಯಕ್ಷೆ ಸಾಂಚಿ ಶರ್ವ, ಪ್ರಮುಖರಾದ ವಿನಯ ಕುಬಸಗೌಡರ, ಸತ್ಯಜಿತ್ ತೋರಗಲ್​ವುಠ, ತರುಣ ಮಹಾಜನ, ಸೂರಜ ಅಳವಂಡಿ, ವೇದಿಕಾ ಮುಳುಗುಂದ, ಡಾ. ಪೂಜಾ ಮಹಾಜನ, ಸುಮಿತ್ರಾ ಅಳವಂಡಿ, ಚೇತನ ತೊಪ್ಪಳದ ಇತರರು ಇದ್ದರು.