ಚಾಮರಾಜನಗರ: ನಗರದ ಚನ್ನಿಪುರಮೋಳೆಯ ಮನೆಯೊಂದರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಡಾವಣೆಯ ನಿವಾಸಿ ಭಾಗ್ಯಾ ಅವರ ಮನೆಯಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಮಗಳ ಮದುವೆಗೆ ಕೂಡಿಟ್ಟಿದ್ದ ಹಣವು ಬೆಂಕಿಗಾಹುತಿಯಾಗಿದೆ. ಮನೆಪತ್ರ, ಟಿವಿ, ಬಟ್ಟೆ ನಾಶವಾಗಿವೆ. ಶಾಸಕರಿಂದ ಪರಿಹಾರ: ಚನ್ನೀಪುರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದ ಮನೆಗೆ ಗುರುವಾರ ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ವೈಯಕ್ತಿಕವಾಗಿ ಪರಿಹಾರ ನೀಡಿದರು. ನಗರಸಭೆ ಮಾಜಿ ಸದಸ್ಯರಾದ ಮಲ್ಲು, ಕೆಂಪರಾಜು, ವಾರ್ಡಿನ ನಿವಾಸಿಗಳಾದ ಶೇಷ, ಮಂಜು, ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್, ಎಇಇ ಶಿವಶಂಕರ ಆರಾಧ್ಯ, ಸೆಸ್ಕ್ ಎಇಇ ಮಹೇಶ್, ಜೆಇ ಮಂಜು ಹಾಜರಿದ್ದರು.