ಹೊಳೆನರಸೀಪುರ: ಮೊಬೈಲ್ ಚಾರ್ಜ್ ಆಗುತ್ತಿರುವ ವೇಳೆ ಬ್ಲಾಸ್ಟ್ ಆಗಿ ಮೊಬೈಲ್ ಶಾಪ್ ನಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಪಟ್ಟಣದ ಅರಕಲಗೂಡು ರಸ್ತೆಯಲ್ಲಿ ಇರುವ ಕೃಷ್ಣಾಪುರ ಗ್ರಾಮದ ಸಂತೋಷ್ ಎಂಬವರ ಅಪ್ಪಾಜಿ ಮೊಬೈಲ್ ಶಾಪ್‌ನಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನ ಅಗ್ನಿ , ಅವಘಡದಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು , ಬೆಂಕಿಗಾವತಿಯಾಗಿವೆ. ಮೊಬೈಲ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿ ಯಾಗಿದ್ದುರಿಪೇರಿಗೆಂದು ನೀಡಿದ್ದ ಗ್ರಾಹಕರ ಮೊಬೈಲ್‌ಗಳು ಸಹ ಭಸ್ಮ ವಾಗಿವೆ.
ಮೊಬೈಲ್‌ಗಳು ಸುಟ್ಟು ಹೋಗಿರುವುದರಿಂದ ಗ್ರಾಹಕರು ಸಹಕರಿಸುವಂತೆ ಸಂತೋಷ್ ಮನವಿ ಮಾಡಿದ್ದಾರೆ. ಅಗ್ನಿಶಾಮಕದಳದ ಠಾಣಾ ಧಿಕಾರಿ ರಂಗನಾಥ್ ಹಾಗೂ ಅವರ ಸಿಬ್ಬಂದಿ ಬೆಂಕಿ ನಂದಿಸಿದರು ಸ್ಥಳಕ್ಕೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ಮಾಡಿದರು.