ಜಿಲ್ಲೆ

ಶಾರದಾ ಕೆ.ಎನ್.ರಾಜಶೇಖರ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀಮತಿ ಶಾರದಾ ಕೆ.ಎನ್.ರಾಜಶೇಖರ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.


ಬಾಲಕರ ವಿಭಾಗದಲ್ಲಿ: ಉದ್ದ ಜಿಗಿತದಲ್ಲಿ ಕೆ.ಪಿ ಶಶಾಂಕ್ ಪ್ರಥಮ, ಕೆ.ಪಿ.ತಿಲಕ್ ದ್ವಿತೀಯ, ಎತ್ತರ ಜಿಗಿತದಲ್ಲಿ ಕೆ.ಪಿ.ಶಶಾಂಕ್ ಪ್ರಥಮ , ಮನೋಜ್ ತೃತೀಯ, ತ್ರಿವಿಧ ಜಿಗಿತದಲ್ಲಿ ಕೆ.ಪಿ ಶಶಾಂಕ್ ಪ್ರಥಮ, ಕೆ.ಎಸ್ ಪ್ರಜ್ವಲ್ ದ್ವಿತೀಯ, 200 ಮೀಟರ್ ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮುಜಾಮಿಲ್ ದ್ವಿತೀಯ, ಕೆ.ಪಿ.ತಿಲಕ್ ತೃತೀಯ, 500 ಮೀಟರ್ ಓಟದಲ್ಲಿ ಕವನರಾಜ್ ತೃತಿಯ, 3000 ಮೀಟರ್ ಓಟದಲ್ಲಿ ಕೆ.ಎಸ್.ಪ್ರಜ್ವಲ್ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ರಾಮಚಂದ್ರ ಪ್ರಥಮ, ಎಂ.ಎಚ್. ಪ್ರೀತಮ್ ದ್ವಿತೀಯ, ಗುಂಡು ಎಸೆತದಲ್ಲಿ ಎಚ್.ಆರ್. ವರದರಾಜ್ ಪ್ರಥಮ, ತಟ್ಟೆ ಎಸೆತದಲ್ಲಿ ಯೋಗರಾಜ್ ತೃತೀಯ, ಬ್ಯಾಡ್ಮಿಂಟನ್ ಹಾಗೂ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.


ಬಾಲಕಿಯರ ವಿಭಾಗದಲ್ಲಿ: ಉದ್ದ ಜಿಗಿತದಲ್ಲಿ ಶಬನಮ್ ಪ್ರಥಮ, ಪ್ರಕೃತಿ ದ್ವಿತೀಯ, ಎತ್ತರ ಜಿಗಿತದಲ್ಲಿ ಶಬನಮ್ ಪ್ರಥಮ, ಲೋಲಾಕ್ಷಿ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ಲೋಲಾಕ್ಷಿ ಪ್ರಥಮ, ಪ್ರಕೃತಿ ದ್ವಿತೀಯ, 100 ಮೀಟರ್ ಓಟದಲ್ಲಿ ಲೋಲಾಕ್ಷಿ ತೃತೀಯ, 200 ಮೀಟರ್ ಓಟದಲ್ಲಿ ಬಬಿತ ದ್ವಿತೀಯ, 400 ಮೀಟರ್ ಓಟದಲ್ಲಿ ಸುಶ್ಮಿತಾ ದ್ವಿತೀಯ, 1500 ಮೀಟರ್ ಓಟದಲ್ಲಿ ಅರ್ಪಿತಾ ಪ್ರಥಮ, 3000 ಮೀಟರ್ ಓಟದಲ್ಲಿ ಅರ್ಪಿತಾ ಪ್ರಥಮ, ದ್ವಿತೀಯ ಶಬನಮ್, 4*100 ಮೀಟರ್ ರಿಲೆಯಲ್ಲಿ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ಶ್ರಾವ್ಯಾ ಪ್ರಥಮ, ಅಂಬಿಕಾ ಆರ್.ಅಂಗಡಿ ದ್ವಿತೀಯ, ತಟ್ಟೆ ಎಸೆತದಲ್ಲಿ ಶ್ರಾವ್ಯಾ ತೃತೀಯ, ಬರ್ಜಿ ಎಸೆತದಲ್ಲಿ ಕೆ.ಎಸ್. ಸ್ನೇಹಾ ಪ್ರಥಮ , ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ಪ್ರಥಮ ಸ್ಥಾನವನ್ನು ಪಡೆದರೆ, ಕಬ್ಬಡಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಪಿ.ವೆಂಕಟೇಶ್, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ.ರುದ್ರಪ್ಪ, ಉಪಾಧ್ಯಕ್ಷ ಎನ್.ಕೆ.ಶ್ಯಾಮರಾವ್, ಕಾರ್ಯದರ್ಶಿ ಕೆ.ಎ. ಕೊಟ್ಟೂರಪ್ಪ, ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಕೊಟ್ಟೂರಪ್ಪ, ಕಾರ್ಯದರ್ಶಿ ಹರೀಶ್ ಸೇರಿದಂತೆ ಸಂಘದ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.