ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಕುಂದಾನಗರಿ ವೈಭವ ಅಧಿವೇಶನವನ್ನು ಉದ್ಘಾಟಿಸಲಾಯಿತು. ಮಲ್ಲಣ್ಣ ಯಾದವಾಡ, ಅಲ್ಲಮಪ್ರಭು ಸ್ವಾಮೀಜಿ, ಸಂಪಾದನಾ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಶಾಮಿಯಾನ ಕಾರ್ಮಿಕರ ಶ್ರಮ ಶ್ಲಾಘನೀಯ

Belagavi

ರಾಮದುರ್ಗ, ಬೆಳಗಾವಿ: ಶಾಮಿಯಾನ ಕಾರ್ಮಿಕರ ಹಾಗೂ ಮಾಲೀಕರ ಸಮಸ್ಯೆಗೆ ಒಗ್ಗಟ್ಟಿನಿಂದ ಮಾತ್ರ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು. ಪಟ್ಟಣದಲ್ಲಿ ಉತ್ತರ ಕರ್ನಾಟಕ ಶಾಮಿಯಾನ್ ಸಪ್ಲೈಯರ್ಸ್‌, ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕ, ನವದೆಹಲಿಯ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗ ನೈಜೇಷನ್ ಮತ್ತು ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಂದಾನಗರಿ ವೈಭವ-2022 ಮಹಾ ಅಧಿವೇಶನದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಯಶಸ್ವಿ ಕಾರ್ಯಕ್ರಮಗಳ ಹಿಂದೆ ಶಾಮಿಯಾನ್ ಕೌಶಲ ಅಡಗಿದೆ. ಕೆಲವೇ ಗಂಟೆಗಳಲ್ಲಿ ಸುಂದರ ಅರಮನೆ ನಿರ್ಮಿಸಬಲ್ಲ ಕಲಾಕುಷಲತೆ ಶಾಮಿಯಾನ್ ಕಾರ್ಮಿಕರಲ್ಲಿದೆ ಎಂದರು.

ಚಿಕ್ಕೋಡಿ ಸಂಪಾದನಾ ಚಿರಮೂರ್ತಿಮಠದ ಸಂಪಾದನಾ ಸ್ವಾಮೀಜಿ, ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಕೆ.ನರಸಿಂಹಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನವದೆಹಲಿಯ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಷನ್ ಉಪಾಧ್ಯಕ್ಷ ಜಿ.ಪೂರ್ಣಚಂದ್ರರಾವ, ಪ್ರಧಾನ ಕಾರ್ಯದರ್ಶಿ ಕರ್ತಾರಸಿಂಗ ಕೋಚಾರ, ಲಕ್ಷ್ಮಣ ದಿಗ್ಗಾವಿ, ಎನ್,ಬಾಬುರಾವ ಮಾತನಾಡಿದರು. ನವದೆಹಲಿಯ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಷನ್ ಅಧ್ಯಕ್ಷ ವಿಪುಲ್ ಸಿಂಘಾಲ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಜಿಪಂ ಮಾಜಿ ಸದಸ್ಯೆ ರತ್ನಾ ಯಾದವಾಡ, ವರ್ತಕ ದಿಲೀಪ ರಾಠಿ, ಶಾಂತಾಬಾಯಿ ರಾಠಿ, ತೆಲಂಗಾಣ ಸಂಘದ ಪದಾಧಿಕಾರಿಗಳಾದ ರಘುಪತಿ, ಕಿಶೋರಕುಮಾರ, ಪಂಚಾರಡ್ಡಿ, ವಿಜಯಪುರ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಮಾನಕರ, ಮೋಹನ ಗಜಕೋಶ, ಈ. ಸುಬ್ರಮಣ್ಯಂ, ಮಾಣಿಕಚಂದ ಲಾಡರ್, ರಾಜಕುಮಾರ ತೊರಗಲ್ಲ, ಚಂದ್ರಶೇಖರ ಹಣವಾಳ, ಸುರೇಶ ಕಲಬರ್ಗಿ, ಪುಂಡಲೀಕ ಗೌಳಿ, ರಾಜು ಕನೇರಿ, ಎನ್. ರಾಮರಾವ, ಬಿ.ಎಂ. ಸೋಮಶೇಖರ ಇತರರಿದ್ದರು.