ಶಹಾಪುರದಲ್ಲಿ ಬುಧವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಜಾವೇದ್ ಇನಾಂದಾರ ಮಾತನಾಡಿದರು. ತಹಸೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಎಸ್.ಎಂ.ಪಾಟೀಲ್ ಇತರರಿದ್ದರು. 
ಜಿಲ್ಲೆ

ಶಾಂತಿಗೆ ಭಂಗ ತಂದರೆ ರೌಡಿಶೀಟರ್ ಓಪನ್

ಹರೀಶ ಕುಲಕರ್ಣಿ

ಶಹಾಪುರ: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್‌ಪಿ ಜಾವೇದ್ ಇನಾಂದಾರ ಹೇಳಿದರು.
ನಗರದ ಜೀವ್ಹೆಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ, ಸ್ಥಳೀಯ ಪೊಲೀಸ್ ಠಾಣೆಯಿಂದ ಬುಧವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಹಬ್ಬಳ ಧಾರ್ಮಿಕ ಭಾವನೆಗೆ ಗೌರವ ನೀಡಬೇಕು. ಯಾರಾದರೂ ಧಾರ್ಮಿಕ ಭಾವನೆಗಳಿಗೆ ಭಂಗ ತರುವ ಕೆಲಸ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ರೌಡಿಶೀಟರ್ ಓಪನ್ ಮಾಡಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾತಿ, ಧರ್ಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸಮುದಾಯದ ಮುಖಂಡರು ತಮ್ಮ ಸಮುದಾಯದ ಯುವಕರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಸಿಪಿಐ ಎಸ್.ಎಂ. ಪಾಟೀಲï ಮಾತನಾಡಿ, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಡೆಯುವ ಮೆರವಣಿಗೆಯಲ್ಲಿ ಬಾಲಕರು ಭಾಗವಹಿಸದಂತೆ ಪಾಲಕರು ಗಮನಹರಿಸಬೇಕು. ಮೂರ್ತಿಗಳ ವಿಸರ್ಜನೆ ವೇಳೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು. ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು. ವಿಸರ್ಜನೆ ವೇಳೆ ತ್ಯಾಜ್ಯ ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು. ಡಿಜೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದನ್ನು ವಶಪಡಿಸಿಕೊಂಡು ಕಮಿಟಿ ಮತ್ತು ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಉಮಕಾಂತ ಹಳ್ಳೆ ಮಾತನಾಡಿ ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಸೂಚಿಸಿದರು. ಪಿಎಸ್‌ಐ ಸೋಮಲಿಂಗಪ್ಪ, ಮಾಜಿ ಸೈನಿಕ ಎಸ್.ಎಂ. ಜಾನಿ, ಪುರಸಭೆ ಮಾಜಿ ಅಧ್ಯP್ಷÀ ಸಣ್ಣ ನಿಂಗಪ್ಪ ನಾಯ್ಕೋಡಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯP್ಷÀ ಗುಂಡಪ್ಪ ತುಂಬಿಗಿ, ಅಡಿವೆಪ್ಪ ಜಾಕಾ, ಪೀಪಲ್ಸï ಫೌಂಡೇಶನ್ ಅಧ್ಯP್ಷÀ ಸೈಯದ್ ಇಸಾಕ್ ಹುಸೇನ್ ಖಾಲಿದ್, ಮುಖಂಡರಾದ ಶಿವಕುಮಾರ ತಳವಾರ, ಶಿವಪುತ್ರ ಜವಳಿ, ವಿಜಯಕುಮಾರ ಎದುರುಮನಿ, ಮಹದೇವ ದಿಗ್ಗಿ, ಅಶೋಕ ಹೊಸಮನಿ, ಸೈಯದ್ ಖಾದ್ರಿ, ಲಾಲ್ ಅಹ್ಮದ್ ಖುರೇಶಿ, ಮುಸ್ತಫಾ ದರ್ಬನ್, ಮಹದೇವಪ್ಪ ಸಾಲಿಮನಿ, ಶಿವಕುಮಾರ ಶಿರವಾಳ ಇತರರಿದ್ದರು.