ಜಿಲ್ಲೆ

ಶಾಂತಿ ಮತ್ತು ಅಹಿಂಸೆ ಬೋಧಿಸಿದ ಜೈನ ಧರ್ಮ

ರಾಯಬಾಗ: ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸಿದ ಜೈನ ಧರ್ಮ ಅತ್ಯಂತ ಶ್ರೇಷ್ಠವಾಗಿದೆ ಎಂದು ಬೆಳಗಾವಿ ಜೈನಮಠದ ಲಕ್ಷಿ$್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಮಹಾವೀರ ಸಮುದಾಯ ಭವನದಲ್ಲಿ ರಾಯಬಾಗ ಅರಿಹಂತ ಚಾರಿಟೇಬಲ್​ ಫೌಂಡೇಷನ್​ ಸಂಸ್ಥೆಯ 8ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಗುವಿನಲ್ಲಿ ಸಂಯಮ, ಸಂಸ್ಕಾರ ಅತಿ ಮುಖ್ಯವಾಗಿದ್ದು, ಪೋಷಕರು ಅಂತಹ ಮೌಲ್ಯಗಳನ್ನು ಬೆಳೆಸಬೇಕು. ಜೈನ ಧರ್ಮದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಚಿಕ್ಕೋಡಿ ಮಹಾವೀರ ಎಜುಕೇಷನ್​ ಟ್ರಸ್ಟ್​ ಅಧ್ಯಕ್ಷ ಮಹಾವೀರ ನೀಲಜಗಿ, ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಸಹಕಾರಿ ಸಹಾಯಕ ನಿಬಂಧಕ ಬಾಹುಬಲಿ ಹಂಜೆ, ಸಿಎ ಕುಂತುಸಾಗರ ಹರದಿ, ಆದಿನಾಥ ತಮದಟ್ಟಿ ಅವರನ್ನೂ ಸತ್ಕರಿಸಲಾಯಿತು.

ಫೌಂಡೇಷನ್​ ಅಧ್ಯಕ್ಷ ಡಿ.ಸಿ.ಸದಲಗಿ, ಕಲಬುರಗಿ ಹಿರಿಯ ದಿವಾಣಿ ನ್ಯಾಯಾಧೀಶ ಸುಶಾಂತ ಚೌಗಲೆ, ದಾದಾಸಾಹೇಬ ಪಾಟೀಲ, ಈರಗೌಡ ಪಾಟೀಲ, ದಶರಥ ಶೆಟ್ಟಿ, ಸಂಜಯ ಬಡೋರೆ, ಶೀತಲ ಬೇಡಕಿಹಾಳೆ, ಪಾರೀಶ ಉಗಾರೆ, ವರ್ಧಮಾನ ಬನವಣೆ, ಸಂಜಯ ಹಂಜೆ, ಮಲ್ಲಪ್ಪ ಖಾನಟ್ಟಿ ಇತರರಿದ್ದರು.