Celebrate Muharram with peace and harmony. 
ಜಿಲ್ಲೆ

ಶಾಂತಿ, ಸೌಹಾರ್ದದಿಂದ ಮೊಹರಂ ಆಚರಿಸಿ

ಗುಳೇದಗುಡ್ಡ: ಮೊಹರಂ ಹಬ್ಬದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಮೊಹರಂ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದು-ಮುಸ್ಲಿಮರು ಸೇರಿ ಮೊಹರಂ ಹಬ್ಬವನ್ನು ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಿಸಬೇಕು ಎಂದರು.

ಸಭೆಯಲ್ಲಿ ಎಂ.ಎಂ. ಮಕಾನದಾರ, ರೆಹಮಾನ ತೆಳ್ಳಿಗುತ್ತಿ, ಗೋಪಾಲ ಜಾಧವ ಯಮನಪ್ಪ ವಡ್ಡರ, ರಾಜು ಸಂಗಮ, ಕಲಿಲ ಕೊತ್ತಲ, ಖಾದರಷಾ ಮಕಾನದಾರ, ರಾಜೇಶಸಾಬ ಮುಂಡಾಸದ, ಮೈಬೂಬಸಾಬ ಮಕಾನದಾರ, ಮುತ್ತಣ್ಣ ಬಜಂತ್ರಿ, ಅಶೋಕ್ ಕೋಟಿ, ಶರಣು ಕೂಡ್ಲೆಪ್ಪನವರ, ಎಚ್.ವೈ.ಮಾಗಿ, ಬೀರಪ್ಪ ಮುಲ್ಲಾನವರ ಮತ್ತಿತರರು ಇದ್ದರು.