ಜಿಲ್ಲೆ

ಶಾಂತಿ ಸಹಬಾಳ್ವೆಗಾಗಿ ದೇಶಾದ್ಯಂತ ಸೈಕಲ್ ಯಾತ್ರೆ

ಹಾಸನ: ಸಮಾಜದಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಅರಿತು ಶಾಂತಿ ಸಹಬಾಳ್ವೆಯಿಂದ ಬದುಕಬೇಕೆಂಬ ಉದ್ದೇಶದಿಂದ ನಗರದ ನಾಗರಾಜುಗೌಡ ಎಂಬುವವರು ದೇಶಾದ್ಯಂತ ಸೈಕಲ್ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ನಗರದ ಹೊಸಲೈನ್ ರಸ್ತೆಯ ನಿವಾಸಿ ನಾಗರಾಜುಗೌಡ ಬ್ರಹ್ಮಚಾರಿಯಾಗಿದ್ದು, ಹಲವು ವರ್ಷಗಳಿಂದಲೂ ದೇಶ ಪರ್ಯಟನೆ ಹಾವ್ಯಾಸವಾಗಿದೆ. ಎಲ್ಲಾ ರಾಷ್ಟ್ರ ಮತ್ತು ರಾಜ್ಯಗಳು ಸಹೋದರ ಭಾವದಿಂದಿರಬೇಕು. ಗಡಿ, ಭಾಷೆ, ಜಲ ವಿಚಾರಗಳಲ್ಲಿ ವೈಷಮ್ಯ ಸಾಧಿಸಬಾರದು ಎಂದು ತಮ್ಮದೇಯಾದ ರೀತಿಯಲ್ಲಿ ನಾಗರಾಜುಗೌಡ ಜನರಿಗೆ ಅರಿವು ಮೂಡಿಸುತ್ತಾರೆ. ಕಾಯಕವೇ ಕೈಲಾಸ, ಜೈ ಜವಾನ್ ಜೈ ಕಿಸಾನ್ ಎನ್ನುವ ನಾಮಫಲಕಗಳನ್ನು ಸೈಕಲ್‌ಗೆ ಅಂಟಿಸಿ ಸೈಕಲ್ ಯಾತ್ರೆ ಮಾಡಿದ್ದಾರೆ
ಈ ಕುರಿತು ಮಾತನಾಡಿದ ಅವರು, 2017ರಲ್ಲಿ ಆರಂಭವಾದ ಸೈಕಲ್ ಯಾತ್ರೆ ಇಂದಿಗೂ ಮುಂದುವರಿದಿದೆ. ರಾಷ್ಟ್ರ ಪ್ರೇಮ, ವಿಶ್ವಶಾಂತಿ, ಸರ್ವಧರ್ಮ ಸಮಬಾಳು, ಗಿಡ ಬೆಳೆಸಿ ಎಂಬುದು ಒಂದು ಕಡೆಯಾದರೇ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದೆಂಬ ಸಂದೇಶ ಸಾರಲು ಯಾತ್ರೆ ಕೈಗೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ಹರಿಯಾಣ, ಪಂಜಾಬ್, ಹಿಮಾಚಲ, ಉತ್ತರಾಖಂಡ್, ದೆಹಲಿ, ಉತ್ತರ ಪ್ರದೇಶ ಹೀಗೆ 15ಕ್ಕೂ ಹೆಚ್ಚು ರಾಜ್ಯಗಳ ಸುತ್ತಾಡಿ ಹಾಸನಕ್ಕೆ ವಾಪಾಸ್ಸಾಗಿದ್ದೇನೆ ಎಂದರು. ನಾಗರಾಜುಗೌಡ ಅವರ ಸಾಹಸಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.