ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವವನ್ನು ತಹಸೀಲ್ದಾರ್ ಡಾ. ದತ್ತಾತ್ರೇಯ ಗಾದಾ ಉದ್ಘಾಟಿಸಿದರು. ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಶಾಂತವೀರ ಶಿವಾಚಾರ್ಯರು, ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಪೌರಾಯುಕ್ತ ರಾಜು ಬಣಕಾರ, ಸಿಪಿಐ ಅಲಿಸಾಬ್, ವಿ.ಬಿ ಹಿರೇಗೌಡರ, ಡಾ.ಬಸವರಾಜ ಸ್ವಾಮಿ, ಅನೀಲಕುಮಾರ ಚಾಂದೆ, ರಾಕೇಶ ಪುರವಂತ ಇತರರಿದ್ದರು. 
ಜಿಲ್ಲೆ

ಶಾಂತಿ ಸಂದೇಶ ನೀಡಿದ ಶ್ರೀ ರೇಣುಕಾಚಾರ್ಯರ

ರಾಜು ಯಮಕನಮರಡಿ

ಬಸವಕಲ್ಯಾಣ: ಸಾಮರಸ್ಯದಿಂದ ಬದುಕಲು ಶಾಂತಿ ಸಂದೇಶ ನೀಡಿ, ಎಲ್ಲರ ಒಳಿತನ್ನು ಬಯಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವ ಸಿದ್ಧಾಂತವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಮುಚಳಂಬನ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ನುಡಿದರು.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಾತ್ಮರು ಎಲ್ಲಿ ಜನ್ಮ ತಾಳಿದರು, ಹೇಗೆ ಎನ್ನುವುದಕ್ಕಿಂತ ಅವರು ಸಾರಿದ ಸಂದೇಶ ಮುಖ್ಯವಾಗುತ್ತವೆ. ಜಗದ್ಗುರು ರೇಣುಕಾಚಾರ್ಯರು ಸಾರಿದ ಸಂದೇಶಗಳು ಸರ್ವರಿಗೂ, ಸರ್ವ ಕಾಲಕ್ಕೂ ಪ್ರಸ್ತುತ ಎಂದರು.

ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಮಹಾತ್ಮರ ತತ್ವ-ಸಂದೇಶಗಳನ್ನು ತಿಳಿದುಕೊಂಡು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎನ್ನುವುದೇ ಮಹಾತ್ಮರ ಹಾಗೂ ಮಹಾಪುರುಷರ ಜಯಂತಿ ಆಚರಣೆಯ ಹಿಂದಿರುವ ಆಶಯವಾಗಿದೆ ಎಂದರು.

ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಗಡಿಗೌಡಗಾಂವದ ಶ್ರೀ ಶಾಂತವೀರ ಶಿವಾಚಾರ್ಯರು, ಸದಲಾಪುರದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ, ಸಿಪಿಐ ಅಲಿಸಾಬ್, ಬಿಸಿಎಂ ಅಧಿಕಾರಿ ವಿ.ಬಿ.ಹಿರೇಗೌಡರ, ಶ್ರೀಮದ್ವೀರಶೈವ ಸದ್ಭೋಧನಾ ಸಂಸ್ಥೆ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಶಿರಸ್ತೇದಾರ್ ಅನೀಲಕುಮಾರ ಚಾಂದೆ ಇತರರಿದ್ದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ನಿರೂಪಣೆ ಮಾಡಿದರು. ಶಾಂತಯ್ಯ ಹಿರೇಮಠ, ಸಿದ್ದಲಿಂಗ ನೇತೆ, ಪ್ರವೀಣ ದಾಂಡೇಕರ್ ಪ್ರಾರ್ಥನಾ ಗೀತೆ ಹಾಡಿದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ಮೂಲಕ ಕಲ್ಯಾಣ ಮಂಟಪದವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಮತ್ತು ಭಾವಚಿತ್ರದ ಭವ್ಯ ಮೆರವಣಿಗೆ ಅಲಂಕೃತ ವಾಹನಗಳಲ್ಲಿ ಜರುಗಿತು. ಮಾಜಿ ಎಂಎಲ್ಸಿ ವಿಜಯಸಿಂಗ್ ಮೆರವಣಿಗೆಗೆ ಚಾಲನೆ ನೀಡಿದರು. ಸಂಸ್ಥಾನ ಗವಿಮಠದ ಶ್ರೀಗಳು, ಹಳ್ಳೀಖೇಡದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ನಗರಸಭೆ ಅಧ್ಯಕ್ಷ ಸಗೀರೋದ್ದಿನ್, ಮಲ್ಲಯ್ಯ ಹಿರೇಮಠ, ಪ್ರಮುಖರಾದ ಪ್ರದೀಪ ವಾತಡೆ, ಅರ್ಜುನ ಕನಕ, ಡಾ.ಜಿ.ಎಸ್.ಭುರಳೆ, ಡಾ.ವಿ.ಎಸ್.ಮಠಪತಿ, ಎಂ.ಕೆ.ನಂದಿ, ಸಂಜೀವ ಜಾಧವ್. ಸಿದ್ದು ಬಿರಾದಾರ, ಸೂರ್ಯಕಾಂತ ಶೀಲವಂತ, ಸೂರ್ಯಕಾಂತ ಮಠ, ವೀರಣ್ಣ, ರುದ್ರೇಶ್ವರ ಗೋರ್ಟಾ, ಶಿಲವಂತ, ರಾಕೇಶ ಪುರವಂತ, ರಾಚಯ್ಯ ಸ್ವಾಮಿ ಇತರರು ಭಾಗವಹಿಸಿದ್ದರು.